ನವದೆಹಲಿ[ಜೂ.12]: ಮಹಿಳೆಯೊಬ್ಬಳು ಮಹಿಳೆ ತನ್ನ ಮನೆಗೆ ಅಳವಿಡಿಸಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಬೆಚ್ಚಿ ಬಿದ್ದಿದ್ದಾರೆ. ಈ ರೆಕಾರ್ಡಿಂಗ್ ನಲ್ಲಿ ವಿಚಿತ್ರ ಪ್ರಾಣಿಯೊಂದು ಕಂಡು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಜನರು ಈ ವಿಡಿಯೋ ನೋಡಿದ ಬಳಿಕ ಚಿತ್ರ ವಿಚಿತ್ರ ಕತೆಗಳನ್ನು ಹುಟ್ಟು ಹಾಕುತ್ತಿದ್ದಾರೆ. 

ತಮ್ಮ ಮನೆಯ ಸೆಕ್ಯೂರಿಟಿ ವಿಡಿಯೋದಲ್ಲಿ ಸೆರೆಯಾದ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿವಿಯನ್ ಗೋಮೋಸ್ 'ನಾನು ಭಾನುವಾರ ಬೆಳಗ್ಗೆ ಈ ವಿಚಿತ್ರ ಜೀವಿ ಕ್ಯಾಮರಾದಲ್ಲಿ ಕಂಡು ಬಂತು. ಇದೇನು ಎಂಬ ಮಾಹಿತಿಯನ್ನು ನಾನು ಕಲೆ ಹಾಕುತ್ತಿದ್ದೇನೆ' ಎಂದಿದ್ದಾರೆ.

ಈ ಕುರಿತಾಗಿ ಮತ್ತಷ್ಟು ಬರೆದಿರುವ ಗೋಮೋಸ್ 'ಮೊದಲ ಬಾರಿ ಈ ನೆರಳು ನಾನು ನೋಡಿದೆ. ಇದು ಬಾಗಿಲಿನ ಕಡೆಗೆ ಬರುತ್ತಿತ್ತು. ಕೇವಲ ಒಂದು ಕ್ಯಾಮರಾದಲ್ಲಿ ಮಾತ್ರ ಇದು ಕಂಡು ಬಂದಿದೆ. ಇನ್ನುಳಿದ ಎರಡು ಕ್ಯಾಮರಾಗಳಲ್ಲಿ ನಾನು ಇದನ್ನು ಹುಡುಕಿದರೂ ಸಿಕ್ಕಿಲ್ಲ. ನೀವೇನಾದರೂ ಈ ವಿಚಿತ್ರ ಜೀವಿಯನ್ನು ಗಮನಿಸಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ.

ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ  ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಇತ್ತ ಟ್ವಿಟರ್ ನಲ್ಲಿ ಸುಮಾರು  ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಸದ್ಯ ಈ ಜೀವಿಯ ಕುರಿತಾಗಿ ಹಲವಾರು ಊಹಾ-ಪೋಹಗಳು ಹರಿದಾಡುತ್ತಿದ್ದು, ಇದು ಅನ್ಯಗ್ರಹ ಜೀವಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.