ಮಹದೇವಪುರ (ಅ.22): ಮಹದೇವಪುರ ಬಿಬಿಎಂಪಿ ಕಚೇರಿಯಲ್ಲಿ ಜಂಟಿ ಆಯುಕ್ತ ಮುನಿವೀರಪ್ಪ ಮೇಲೆ ಮಹಿಳೆಯಿಂದ ಚಪ್ಪಲಿ ಸೇವೆ ಆಗಿರುವ ಘಟನೆ ನಡೆದಿದೆ

ಇಂದು ಸಂಜೆ 4.20 ರ ವೇಳೆ ಘಟನೆ ಸಂಭವಿಸಿದೆ. ಸಿಬ್ಬಂದಿಗಳ ಎದುರೇ ಚಪ್ಪಲಿ ಸೇವೆ ಮಾಡಿದ ಮಹಿಳೆ ಕಳೆದ ಕೆಲ ದಿನಗಳಿಂದ ಜೆಸಿ ಮುನಿವೀರಪ್ಪ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದು, ಈ ವೇಳೆ ತನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದ ಮಹಿಳೆ ಹಾಗೂ ಹಲ್ಲೆಗೊಳಗಾದ ಜೆಸಿ ಮುನಿವೀರಪ್ಪ ಇಬ್ಬರಿಂದಲೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.