ಪಾಟ್ನಾ :  ಬಿಹಾರದಲ್ಲಿ ಯುವತಿಯೋರ್ವಳು ತನ್ನ ವಿವಾಹ ಕಾರ್ಯಕ್ರಮ ನಡೆದ ಕೆಲವೇ ಗಂಟೆಯಲ್ಲಿ ತಂದೆಯ ಅಂತ್ಯಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡ ಮನಕಲುಕುವ ಘಟನೆಯೊಂದು ನಡೆದಿದೆ. 

ಬಿಹಾರದ ಕೈಮುರ್ ಪ್ರದೇಶದಲ್ಲಿ ಯುವತಿಯ ವಿವಾಹ ಕಾರ್ಯಕ್ರಮ ನಡೆದಿದ್ದು, ಇದಾದ ಕೆಲವೇ ಸಂದರ್ಭದಲ್ಲಿ ಯುವತಿಯ ತಂದೆ ಗುಂಡೇಟಿಗೆ ಬಲಿಯಾಗಿದ್ದರು. 

ತನ್ನ ಮಗಳ ಕನ್ಯಾದಾನಕ್ಕಾಗಿ ಉಪವಾಸವಿದ್ದು, ಕನ್ಯಾದಾನ ನಡೆಸಿಕೊಟ್ಟು ಕೆಲವೇ ಗಂಟೆಗಳಲ್ಲಿ ಗುಂಡೇಟಿನಿಂದ ಮೃತರಾಗಿದ್ದಾರೆ. ತಾಳಿ ಕಟ್ಟಿಸಿಕೊಂಡ ಯುವತಿ ಸೀದಾ ತಂದೆ ಅಂತಿಮ ಸಂಸ್ಕಾರವನ್ನು ನೆರವೇರಿಸುವ ದುರ್ಗತಿ ಬಂದೊದಗಿತು. ಈ ಬಗ್ಗೆ ವಧು ದುಃಖ ತೋಡಿಕೊಂಡಿದ್ದಾರೆ.  ತಾನು ತನ್ನ ಪತಿ ಸೇರಿ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾಗಿ ಹೇಳಿದ್ದಾಳೆ. 

ದೇಶದಲ್ಲಿ ಇರುವ ಹಿಂದೂ ಸಂಪ್ರದಾಯದ ಪ್ರಕಾರವಾಗಿ ಯಾವುದೇ ಕುಟುಂಬದಲ್ಲಿ ವ್ಯಕ್ತಿಯು ಮೃತಪಟ್ಟಲ್ಲಿ ನವ ವಿವಾಹಿತರು  ಸಾವಿನ ಸಂಸ್ಕಾರದಲ್ಲಿ ಒಂದು ವರ್ಷದ ವರೆಗೂ ಪಾಲ್ಗೊಳ್ಳುವಂತಿಲ್ಲ. ಆದರೆ ಇದೀಗ ಈ ನವ ವಿವಾಹಿತೆಯು ಮದುವೆಯಾದ  ಒಂದೇ ಗಂಟೆಯಲ್ಲಿ ತನ್ನ ತಂದೆಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ.