ಬಿಜೆಪಿ ಮುಖಂಡನೋರ್ವ ವ್ಯಕ್ತಿಯೋರ್ವನನ್ನು ಬಗ್ಗಿಸಿ ಮೈಮೇಲೆ ನೀರಿನ ಬಾಟಲ್ ಇರಿಸಿಕೊಳ್ಳಲು ಒತ್ತಾಯಿಸಿ, ಹಿಂಸಾತ್ಮಕವಾಗಿ ನಡೆಸಿಕೊಂಡಿದ್ದಕ್ಕೆ ಮನನೊಂದು ಆತನ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಬಲ್’ಪುರದಲ್ಲಿ ನಡೆದಿದೆ.
ಜಬಲ್’ಪುರ : ಬಿಜೆಪಿ ಮುಖಂಡನೋರ್ವ ವ್ಯಕ್ತಿಯೋರ್ವನನ್ನು ಬಗ್ಗಿಸಿ ಮೈಮೇಲೆ ನೀರಿನ ಬಾಟಲ್ ಇರಿಸಿಕೊಳ್ಳಲು ಒತ್ತಾಯಿಸಿ, ಹಿಂಸಾತ್ಮಕವಾಗಿ ನಡೆಸಿಕೊಂಡಿದ್ದಕ್ಕೆ ಮನನೊಂದು ಆತನ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಬಲ್’ಪುರದಲ್ಲಿ ನಡೆದಿದೆ.
ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ ವ್ಯಕ್ತಿಯನ್ನು ಬಗ್ಗಿಸಿ ಆತ ಬೆನ್ನ ಮೇಲೆ ನೀರನ್ನು ಇರಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ದೃಶ್ಯವೀಗ ಎಲ್ಲೆಡೆ ವಾಟ್ಸಾಪ್’ಗಳಲ್ಲಿ ಹರಿದಾಡುತ್ತಿದೆ.
ಅಲ್ಲದೇ ಆತನನ್ನು ಹಿಂಸಿಸಿದ್ದು, ಬಾಯಿಗೆ ಬಂದಂತೆ ನಿಂದಿಸಲಾಗಿದೆ. ಈ ದೃಶ್ಯವನ್ನು ಕಾಲೇಜಿನಲ್ಲಿ ವೀಕ್ಷಿಸಿದ ಆಕೆ ಮನೆಗೆ ಬಂದವಳೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಆಕೆಯ ತಾಯಿ ಹೇಳಿದ್ದಾರೆ.
