ಎಂ.ಬಿ. ಪಾಟೀಲ್ ದೂರಿದ ಮಹಿಳೆ ಮುಖಕ್ಕೆ ಮಸಿ

Woman attacked by Congress workers in Vijaypura
Highlights

ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ್ ವಿರುದ್ದ ಅಶ್ಲೀಲ ಪದ ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳ ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದೆ. ಇಲ್ಲಿನ ರಬಕವಿ ಗ್ರಾಮದ ಚಂದ್ರೆವ್ವ ಕೋಲಾರ ಎಂಬ ಮಹಿಳೆ ಎಂ.ಬಿ. ಪಾಟೀಲ್ ವಿರುದ್ದ ಅಶ್ಲೀಲ ಪದ ಬಳಸಿದ್ದಾಳೆ ಎಂದು ಆರೋಪಿಸಲಾಗಿದೆ.

ವಿಜಯಪುರ [ಮೇ. 23]: ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ್ ವಿರುದ್ದ ಅಶ್ಲೀಲ ಪದ ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳ ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದೆ. ಇಲ್ಲಿನ ರಬಕವಿ ಗ್ರಾಮದ ಚಂದ್ರೆವ್ವ ಕೋಲಾರ ಎಂಬ ಮಹಿಳೆ ಎಂ.ಬಿ. ಪಾಟೀಲ್ ವಿರುದ್ದ ಅಶ್ಲೀಲ ಪದ ಬಳಸಿದ್ದಾಳೆ ಎಂದು ಆರೋಪಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ನಾಯಕ ವಿಜುಗೌಡ ಪಾಟೀಲ್ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತರು  ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಚಂದ್ರೆವ್ವಳನ್ನು ತಡೆದು ಆಕೆಯ ಮುಖಕ್ಕೆ ಮಸಿ ಬಳಿದಿದ್ದಾರೆ. ಇದಕ್ಕೂ ಮೊದಲು ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. 

ಇತ್ತಿಚೀಗೆ ಜರುಗಿದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಚಂದ್ರೆವ್ವ, ಎಂ.ಬಿ. ಪಾಟೀಲ್ ವಿರುದ್ದ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಅಶ್ಲೀಲ ಪದ ಬಳಿಸಿದ್ದರು ಎಂದು ಹೇಳಲಾಗಿದೆ.

loader