ಸಿಂದಗಿ:  ತೋಟಗಾರಿಕೆ ಸಚಿವ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರ ಕಾರನ್ನು ಮಹಿಳೆಯೊಬ್ಬರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ನಡೆದಿದೆ. ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಮನಗೂಳಿ ಅವರನ್ನು  ಜರಿನಾ ತಾಂಬೆ ಎಂಬ ಮಹಿಳೆ  ತರಾಟೆಗೆ ತೆಗೆದುಕೊಂಡರು.

‘ನಾವು ಮತ ಹಾಕುವ ನಮ್ಮನ್ನು ಮಾತನಾಡಿಸುತ್ತೀರಾ. ನಮಗೆ ಕೈಯನ್ನೂ ಮುಗಿಯುತ್ತೀರಿ. ಈಗ ನಾವೇ ನಿಮಗೆ ಕೈ ಮುಗಿಯುವಂತಾಗಿದೆ. ಎಲೆಕ್ಷನ್ ಮುಗಿದ ನಂತರ ನಮ್ಮನ್ನು ಯಾರೂ ಕೇಳುವವರೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ಕೆಲಸ ಮಾಡಿಕೊಡಿ ಎಂದು ನಿಮ್ಮನ್ನು ಕೇಳಿದರೆ, ಬಿಜೆಪಿಯ ಭೂಸನೂರ ಬಳಿ ಹೋಗು ಎಂದು ಹೇಳುತ್ತಾರೆ. 

ನಾವು ನಿಮಗೆ ಮತ ಹಾಕಿ ಗೆಲ್ಲಿಸಿದ್ದೇವೆ. ಅವರನ್ನು ಯಾಕೆ ಕೇಳಬೇಕು’ ಎಂದು ಕಿಡಿಕಾರಿದಳು. ಮಹಿಳೆಯನ್ನು ಸಚಿವರ ಬೆಂಬಲಿಗರು ಸಮಾಧಾನಪಡಿಸಿದರು. ನಂತರ ಸಚಿವರು ಕಾರನ್ನೇರಿ ಮುಂದೆ ಸಾಗಿದರು.