ಗೃಹ ಸಚಿವರ ಸೋದರಳಿಯನಿಂದ ಅತ್ಯಾಚಾರ : ಮಹಿಳೆ ದೂರು

Woman accuses Chhattisgarh Home Minister's nephew of rape
Highlights

ಗೃಹ ಸಚಿವರ ಸೋದರ ಸಂಬಂಧಿಯಿಂದ ತಮ್ಮ ಮೇಲೆ ಅತ್ಯಾಚಾರ ನಡೆದಿದ್ದಾಗಿ ಮಹಿಳೆಯೋರ್ವರು ದೂರು ನೀಡಿದ್ದು, ಈ ಸಂಬಂಧ  ಇದೀಗ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. 

ಚತ್ತೀಸ್ ಗಢ :  ಚತ್ತೀಸ್ ಗಢದ ಗೃಹ ಸಚಿವ ರಾಮ್ ಸೇವಕ್ ಪೈಕರ್ ಸೋದರ ಸಂಬಂಧಿ ಶಮೋದ್ ಪೈಕರ್ಸ್  ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಮಹಿಳೆಯೋರ್ವರು  ದೂರು ನೀಡಿದ್ದಾರೆ.  ಸೂರಜ್ ಪುರ ಜಿಲ್ಲೆಯಲ್ಲಿ 2014ರಲ್ಲಿ ಈ ಕೃತ್ಯ ನಡೆದಿದ್ದಾಗಿ ಮಹಿಳೆ ಹೇಳಿದ್ದಾರೆ. 

ಈ ಮಹಿಳೆಯು 2 ಮಕ್ಕಳ ತಾಯಿಯಾಗಿದ್ದು, ತಮಗೆ ಆ ವ್ಯಕ್ತಿ 2014ರಲ್ಲಿ ಆತ್ಮೀಯರಾಗಿದ್ದರು. ನಾವು ಒಟ್ಟಿಗೆ ಓದುತ್ತಿದ್ದವು. ಇಂತಹ ಸಂದರ್ಭದಲ್ಲಿ ಆತನಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಹೇಳಿದ್ದಾರೆ.

ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದು, ದೂರಿನಲ್ಲಿ  ತಾವು ಗರ್ಭಿಣಿಯಾದ ಬಳಿಕ ತಮ್ಮೊಂದಿಗೆ ಮಾತನಾಡುವುದು ನಿಲ್ಲಿಸಿದ. ಅಲ್ಲದೇ ಡಿಎನ್ಎ ಯಲ್ಲಿ ಸುಳ್ಳು ವರದಿ ನೀಡಲು ಯತ್ನಿಸಿದ್ದು, ಮಗುವನ್ನು ಅಬಾರ್ಷನ್ ಮಾಡಿಸಲು ಯತ್ನಿಸಿದ್ದ. 

ಆದರೆ ತಾವು ಮಗುವನ್ನು ಬೆಳೆಸಬೇಕೆಂದು ತೀರ್ಮಾನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅವರ ದೂರನ್ನು ಆಧರಿಸಿ ಇದೀಗ ತನಿಖೆಯನ್ನು ಮುಂದುವರಿಸಿದ್ದಾಗಿ ಪೊಲೀಸ್ ಆಯುಕ್ತ ಜಿ. ಜೈಸ್ವಾಲ್ ಹೇಳಿದ್ದಾರೆ.

loader