Asianet Suvarna News Asianet Suvarna News

ಜನಧನ್'ಗೆ ಒಂದು ವಾರದಲ್ಲಿ 1000 ಕೋಟಿ ರು. ಜಮೆ

500 ಮತ್ತು 1000 ನೋಟುಗಳ ಅಪನಗದೀಕರಣದ ತರುವಾಯ ಡಿ.7ರಂದು ಜನಧನ ಖಾತೆಗಳಲ್ಲಿನ ಸಾರ್ವಕಾಲಿಕ ಗರಿಷ್ಠ .74,610ಕ್ಕೇರಿತ್ತು. ಬಳಿಕ ಠೇವಣಿ ಹಿಂತೆಗೆತ ಆರಂಭವಾಗಿತ್ತು.

Withdrawal trend reverses in Jan Dhan accounts deposits up Rs1k cr

ನವದೆಹಲಿ(ಏ.17): ಅಪನಗದೀಕರಣದ ವೇಳೆ ಕಪ್ಪುಹಣಕ್ಕೆ ‘ಆಶ್ರಯ' ನೀಡಿದ ಗುಮಾನಿಗೆ ಒಳಗಾಗಿದ್ದ ಜನಧನ ಖಾತೆಗಳಲ್ಲಿನ ಹಣ ಮಾರ್ಚ್ 29ರಿಂದ ಏಪ್ರಿಲ್‌ 5ರ ನಡುವಿನ ಒಂದೇ ವಾರದ ಅವಧಿಯಲ್ಲಿ 1000 ಕೋಟಿ ರು.ನಷ್ಟು ಏರಿದೆ.
ಮಾರ್ಚ್ 29ಕ್ಕೆ ಅಂತ್ಯಗೊಂಡ ವಾರದಲ್ಲಿ 62,972.42 ಕೋಟಿ ರು. ಇದ್ದ ಜನಧನ ಖಾತೆ​ಗಳಲ್ಲಿನ ಠೇವಣಿ ಏಪ್ರಿಲ್‌ 5ಕ್ಕೆ 63,971.38 ಕೋಟಿ ರು.ಗೆ ಏರಿದೆ ಎಂದು ಹಣಕಾಸು ಸಚಿವಾಲಯದ ದತ್ತಾಂಶಗಳು ಹೇಳಿವೆ.
500 ಮತ್ತು 1000 ನೋಟುಗಳ ಅಪನಗದೀಕರಣದ ತರುವಾಯ ಡಿ.7ರಂದು ಜನಧನ ಖಾತೆಗಳಲ್ಲಿನ ಸಾರ್ವಕಾಲಿಕ ಗರಿಷ್ಠ .74,610ಕ್ಕೇರಿತ್ತು. ಬಳಿಕ ಠೇವಣಿ ಹಿಂತೆಗೆತ ಆರಂಭವಾಗಿತ್ತು. ಈಗ ಡಿ.7ರ ನಂತರ ಇದೇ ಮೊದಲ ಬಾರಿಗೆ ಕುಸಿತದ ಪರ್ವ ಮುಗಿ ದಿದ್ದು, ಒಂದು ವಾರದಲ್ಲಿ ಸಾವಿರ ಕೋಟಿ ರು.ನಷ್ಟುಏರಿದೆ. ಈ ನಡುವೆ ಜನಧನ ಖಾತೆಗಳ ಸಂಖ್ಯೆಯೂ 28.23 ಕೋಟಿಗೆ ಏರಿದ್ದು, ಈ ಪೈಕಿ 18.50 ಕೋಟಿ ಖಾತೆಗಳು ಆಧಾರ್‌ಗೆ ಸಂಯೋಜನೆಯಾಗಿವೆ. ಅಪನಗದೀಕರಣದಲ್ಲಿ ಆಧಾರ್‌ ಖಾತೆಗಳು ದುರ್ಬಳಕೆಯಾಗುವುದನ್ನು ಮನಗಂಡಿದ್ದ ಸರ್ಕಾರ, ಇವುಗಳಲ್ಲಿನ ಹಣ ಹಿಂತೆಗೆತದ ಮೇಲೆ ಹಲವು ಮಿತಿಗಳನ್ನು ಹೇರಿತ್ತು.

Follow Us:
Download App:
  • android
  • ios