ಚೆನ್ನೈ (ಸೆ.29): ಇಂದು ನಡೆದ ಕಾವೇರಿ ಸಂಧಾನ ಸಭೆಯ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಿಎಂ ಜಯಲಲಿತಾ ಉದ್ದೇಶಪೂರ್ವಕವಾಗಿ ಕರ್ನಾಟಕ ಸುಪ್ರೀಂ ಆದೇಶವನ್ನು ಉಲ್ಲಂಘನೆ ಮಾಡುತ್ತಿದೆ ಆರೋಪಿಸಿದ್ದಾರೆ.
ಡಿಹೈಡ್ರೇಶನ್ ನಿಂದ ಆಸ್ಪತ್ರೆಗೆ ದಾಖಲಾಗಿರುವ ಅಮ್ಮಾ, ಸಭೆಯ ಸಾರಾಂಶವನ್ನು ಅಲ್ಲಿಗೆ ತರಿಸಿಕೊಂಡು ಓದಿದರು. ಸುಪ್ರೀಂ ಆದೇಶವನ್ನು ಕರ್ನಾಟಕ ಉಲ್ಲಂಘಿಸುತ್ತಿದೆ. ನ್ಯಾಯಾಲಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ತಮಿಳರ ವಿರುದ್ದ ದಂಗೆ ಏಳಲು, ಕಾನೂನು ಉಲ್ಲಂಘಿಸಲು ಕರ್ನಾಟಕ ಸರ್ಕಾರದ ಪಿತೂರಿಯೇ ಕಾರಣ ಎಂದು ಅಮ್ಮಾ ಹೇಳಿದ್ದಾರೆ.
