ಕ್ಷಯ ರೋಗದಿಂದ ಬಳಲುತ್ತಿದ್ದ ಸಲ್ಮಾನ್ ಖಾನ್ ಸಹನಟಿ ಪೂಜಾ ದದ್ವಾಲ್ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡು ಬಂದಿದೆ. ಸನ್ಮಾನ್ ಖಾನ್ ಅವರ ನೆರವಿನಿಂದ ಇದೀಗ ಪೂಜಾ ನಡೆದಾಡುವಂತಾಗಿದ್ದಾರೆ. 

ಮುಂಬೈ : ಕ್ಷಯ ರೋಗದಿಂದ ಸಾವಿನ ಹಂತಕ್ಕೆ ತೆರಳಿದ್ದ ಬಾಲಿವುಡ್ ನಟಿ ಪೂಜಾ ದದ್ವಲ್ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ. 

ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದ ಪೂಜಾ ಅವರ ಕ್ಷಯರೋಗದ ವಿಚಾರ ತಿಳಿಯುತ್ತಿದ್ದಂತೆ ಸಲ್ಲು ನೆರವು ನೀಡಿದ್ದರು. ಆಸ್ಪತ್ರೆಗೆ ಸೇರುವಾಗ ಕೇವಲ 23 ಕೆಜಿ ಇದ್ದ ಪೂಜಾ ತೂಕದಲ್ಲಿ ಇದೀಗ 20 ಕೆಜಿ ಏರಿಕೆ ಕಂಡು ಬಂದಿದೆ.

ಪೂಜಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಲಲಿತ್ ಆನಂದೆ ಅವರು ಈ ಬಗ್ಗೆ ಮಾತನಾಡಿ ಮೊದಲು ಆಕೆಯನ್ನು ಭೇಟಿ ಮಾಡಿದಾಗ ತಾವು ಮೊದಲಿನಂತೆ ಆಗಬೇಕು ಎಂದು ಹೇಳಿದ್ದರು ಇದೀಗ ಭರವಸೆಯೊಂದಿಗೆ ಆಕೆ ಹೋರಾಡಿ ಸಾಕಷ್ಟು ಚೇತರಿಕೆಯನ್ನು ಕಂಡುಕೊಂಡಿದ್ದಾರೆ ಎಂದಿದ್ದಾರೆ. 

ಸಾಕಷ್ಟು ಮಾಧ್ಯಮಗಳಲ್ಲಿಯೂ ಕೂಡ ಪೂಜಾ ಅನಾರೋಗ್ಯವು ಸುದ್ದಿಯಾಗಿತ್ತು. ಆರ್ಥಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಅವರಿಗೆ ಚಿಕಿತ್ಸೆ ವೆಚ್ಚವನ್ನು ಭರಿಸುವ ಸಾಮರ್ಥ್ಯವೂ ಕೂಡ ಇರಲಿಲ್ಲ. 

ಈ ಸುದ್ದಿಯನ್ನು ತಿಳಿಯುತ್ತಿದ್ದಂತೆ ಸಲ್ಮಾನ್ ಖಾನ್ ಫೌಂಡೇಶನ್ ಅವರ ಚಿಕಿತ್ಸೆಗೆ ನೆರವು ನೀಡಿದ್ದು, ಇದೀಗ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎಂದು ಸಿವೇರಿ ಟಿಬಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.