ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಅಪ್ಪ ಮಗನ ನಡುವಿನ ರಾಜಕೀಯ ಕಾದಾಟ ಮುಗಿಯುತ್ತಿಲ್ಲ. ಸೈಕಲ್ ಗಾಗಿ ನಡೆಸುತ್ತಿರುವ ಕಿತ್ತಾಟ ಮುಂದುವರೆದಿದೆ.
ಲಕ್ನೋ (ಜ.09): ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಅಪ್ಪ ಮಗನ ನಡುವಿನ ರಾಜಕೀಯ ಕಾದಾಟ ಮುಗಿಯುತ್ತಿಲ್ಲ. ಸೈಕಲ್ ಗಾಗಿ ನಡೆಸುತ್ತಿರುವ ಕಿತ್ತಾಟ ಮುಂದುವರೆದಿದೆ.
ಮುಲಯಾಂ ಸಿಂಗ್ ಹಾಗೂ ಶಿವಪಾಲ್ ಯಾದವ್ ನೇತೃತ್ವದ ತಂಡ ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ ‘ಸೈಕಲ್’ ನಮಗೆ ಬೇಕು ಎಂದು ಕೇಳಿಕೊಂಡಿದ್ದಾರೆ. ಅದೇ ರೀ ಅಖಿಲೇಶ್ ಯಾದವ್ 2.30 ಕ್ಕೆ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ.
ಅಖಿಲೇಶ್ ಯಾದವ್ ಪಕ್ಷದ ಚಿಹ್ನೆ ಸೈಕಲ್ ಹಾಗೂ ಪಕ್ಷದ ಮುಖ್ಯಸ್ಥ ಸ್ಥಾನದ ಬಗ್ಗೆ ತಂದೆ ಮುಲಯಾಂ ಸಿಂಗ್ ಗೆ ಸವಾಲೆಸೆದಿದ್ದರು. 229 ಶಾಸಕರಲ್ಲಿ 200 ಶಾಸಕರ ಬೆಂಬಲವನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ.
ನನ್ನ ಮತ್ತು ಮಗನ ನಡುವೆ ಭಿನ್ನಾಭಿಪ್ರಾಯವಿಲ್ಲ. ಪಕ್ಷದಲ್ಲಿ ಕೆಲವು ಸಮಸ್ಯೆಗಳಿವೆ. ಇವೆಲ್ಲದರ ಹಿಂದೆ ಒಬ್ಬರ ಕೈವಾಡವಿದೆ. ಶೀಘ್ರದಲ್ಲಿಯೇ ವಿಚಾರ ಇತ್ಯರ್ಥಗೊಳ್ಳಲಿದೆ ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.
