ಮೆಗಾ ಮಿಲಿಯನ್ಸ್ ಲಾಟರಿ ಜಾಕ್‌ಪಾಟ್‌ನಲ್ಲಿ ಅದೃಷ್ಟಶಾಲಿಯೊಬ್ಬರು ಭರ್ಜರಿ 11370  ಕೋಟಿ ರು.ಮೌಲ್ಯದ ಲಾಟರಿ ಗೆದ್ದಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲಿಯೇ ಎರಡನೇ ಅತಿದೊಡ್ಡ ಬಹುಮಾನದ ಮೊತ್ತವಾಗಿದೆ.

ವಾಷಿಂಗ್ಟನ್: ಅಮೆರಿಕದಲ್ಲಿ ಬುಧವಾರ ಪ್ರಕಟವಾದ ಮೆಗಾ ಮಿಲಿಯನ್ಸ್ ಲಾಟರಿ ಜಾಕ್‌ಪಾಟ್‌ನಲ್ಲಿ ಅದೃಷ್ಟಶಾಲಿಯೊಬ್ಬರು ಭರ್ಜರಿ 11370 ಕೋಟಿ ರು.ಮೌಲ್ಯದ ಲಾಟರಿ ಗೆದ್ದಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲಿಯೇ ಎರಡನೇ ಅತಿದೊಡ್ಡ ಬಹುಮಾನದ ಮೊತ್ತವಾಗಿದೆ.
ದಕ್ಷಿಣ ಕೆರೋಲಿಯಾನದಲ್ಲಿ ಟಿಕೆಟ್ ಖರೀದಿಸಿದ್ದ ವ್ಯಕ್ತಿಗೆ ಬಂಪರ್ ಬಹುಮಾನ ಬಂದಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರೆ ಸುರಕ್ಷತೆಯ ದೃಷ್ಟಿಯಿಂದ ಅದೃಷ್ಟಶಾಲಿಯ ಹೆಸರು ಬಹಿರಂಗಪಡಿಸಲಾಗಿಲ್ಲ. ನಿಯಮಗಳ ಪ್ರಕಾರ ಬಂಪರ್ ಲಾಟರಿ ಗೆದ್ದ ವ್ಯಕ್ತಿ, ತಕ್ಷಣವೇ ಹಣ ಪಡೆಯುವುದಾದರೆ ಆತನಿಗೆ ಅಂದಾಜು 6750 ಕೋಟಿ ರು. ನಗದು ನೀಡಲಾಗುವುದು. ಒಂದು ವೇಳೆ ಪೂರ್ತಿ ಹಣ ಬೇಕೆಂದಾದಲ್ಲಿ ಆತ 26 ವರ್ಷ ಕಾಯಬೇಕು. 

ಇಷ್ಟು ಅವಧಿಯಲ್ಲಿ ಆತನಿಗೆ ಹಂತಹಂತವಾಗಿ ಹಣವನ್ನು ನೀಡಲಾಗುವುದು. ಇದೇ ವೇಳೆ 2 ನೇ ಬಹುಮಾನವಾಗಿ 36 ಜನರಿಗೆ ತಲಾ 7.4 ಕೋಟಿ ರು. ನೀಡಲಾಗುವುದು.