ನವದೆಹಲಿ(ಆ.14): ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿ ಪಾಕ್ ವಶದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದ, ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ವೀರಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ನಾಳೆ(ಆ.15)ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆಯುವ ಸಮಾರಂಭಧಲ್ಲಿ ಅಭಿನಂದನ್ ಅವರಿಗೆ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಫೆ.27 ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ತಮ್ಮ ಮಿಗ್-21 ಅಪಘಾತಕ್ಕೀಡಾದ ಪರೀಣಾಮ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದು ಪಾಕ್ ಸೈನಿಕರಿಂದ ಬಂಧನಕ್ಕೊಳಗಾಗಿದ್ದರು.

ಆದರೆ ಸತತ ಪ್ರಯತ್ನಗಳ ನಂತರ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸಲು ಪಾಕಿಸ್ತಾನ ಸಮ್ಮತಿ ಸೂಚಿಸಿತ್ತು. ವಾಘಾ ಗಡಿಯ ಮೂಲಕ ಅಭಿನಂದನ್ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದರು.