ಮೋದಿಗೆ ಅಪ್ಪುಗೆ : ಪ್ರೀತಿಯಿಂದ ಗೆಲ್ಲಬೇಕೆ ಹೊರತು ಧ್ವೇಷದಿಂದಲ್ಲ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Jul 2018, 3:17 PM IST
Will win with love not hate Says Rahul Gandhi
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದು ಬಹಳಷ್ಟು ಸುದ್ದಿಯಾಗಿದ್ದು ಅನೇಕರು ಟೀಕೆ ಮಾಡಿದ್ದರು. ಈ ಸಂಬಂಧ ಇದೀಗ ಪ್ರತಿಕ್ರಿಯೆ ನೀಡಿರುವ ರಾಹುಲ್ ಪ್ರೀತಿಯಿಂದ ಗೆಲ್ಲಬೇಕೆ ವಿನಃ ಧ್ವೇಷದಿಂದಲ್ಲ ಎಂದು ಹೇಳಿದ್ದಾರೆ. 

ನವದೆಹಲಿ: ಜನರ ಪ್ರೀತಿ ಮತ್ತು ಸಹಾನುಭೂತಿ ಯಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭೆಯಲ್ಲಿ ಶುಕ್ರವಾರ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ,  ಭಾಷಣ ಮಾಡಿ, ಪ್ರಧಾನಿ ಮೋದಿಗೆ ಅಪ್ಪುಗೆ ನೀಡಿದ್ದ  ರಾಹುಲ್ ಶನಿವಾರ ಈ  ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ಸಂಸತ್ತಿನಲ್ಲಿ ಪ್ರಧಾನಿ ಯವರು ತಮ್ಮನ್ನು ನಿರೂಪಿಸಿ ಕೊಳ್ಳಲು ಕೆಲವು ಜನರಲ್ಲಿ ದ್ವೇಷ, ಭಯ ಮತ್ತು ಆಕ್ರೋಶದ ಭಾವನೆಯನ್ನು ಬಿತ್ತಿದ್ದಾರೆ. ಆದರೆ, ಭಾರತೀಯರ ಪ್ರೀತಿ ಮತ್ತು ಸಹಾನುಭೂತಿಯಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂಬುದನ್ನು ಸಾಬೀತು ಪಡಿಸಲಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

loader