ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(GST) ಜುಲೈ ಒಂದರಿಂದ ಜಾರಿಗೆ ಬಂದಿದೆ. ಆದರೆ GST ಜಾರಿಗೊಳಿಸಿದ ಬಳಿಕ ಗೊಂದಲ ಮೂಡಿಸುವಂತಹ ಹಲವಾರು ವಿಚಾರಗಳು ಸದ್ದು ಮಾಡುತ್ತಿವೆ. ಸದ್ಯ ಕ್ರೆಡಿಟ್ ಕಾರ್ಡ್ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಗೊಂದಲ ಮೂಡಿಸುವಂತಹ ಸಂದೇಶಗಳು ಹರಿದಾಡುತ್ತಿವೆ. ಇದೀಗ GST 'ಆರ್ಕಿಟೆಕ್ಟ್' ಎಂದೇ ಕರೆಯಲ್ಪಡುವ ರಾಜ್ಯ ಸಚಿವ ಹಸ್ಮುಖ್ ಅಧಿಯಾ ಮೈಕ್ರೋ ಬ್ಲಾಗಿಂಗ್ ವೆಬ್'ಸೈಡ್ ಆಗಿರುವ ಟ್ವಿಟರ್'ನಲ್ಲಿ ಈ ಗೊಂದಲವನ್ನು ಪರಿಹರಿಸುವ ಯತ್ನ ಮಾಡಿದ್ದಾರೆ.
ನವದೆಹಲಿ(ಜು.05): ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(GST) ಜುಲೈ ಒಂದರಿಂದ ಜಾರಿಗೆ ಬಂದಿದೆ. ಆದರೆ GST ಜಾರಿಗೊಳಿಸಿದ ಬಳಿಕ ಗೊಂದಲ ಮೂಡಿಸುವಂತಹ ಹಲವಾರು ವಿಚಾರಗಳು ಸದ್ದು ಮಾಡುತ್ತಿವೆ. ಸದ್ಯ ಕ್ರೆಡಿಟ್ ಕಾರ್ಡ್ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಗೊಂದಲ ಮೂಡಿಸುವಂತಹ ಸಂದೇಶಗಳು ಹರಿದಾಡುತ್ತಿವೆ. ಇದೀಗ GST 'ಆರ್ಕಿಟೆಕ್ಟ್' ಎಂದೇ ಕರೆಯಲ್ಪಡುವ ರಾಜ್ಯ ಸಚಿವ ಹಸ್ಮುಖ್ ಅಧಿಯಾ ಮೈಕ್ರೋ ಬ್ಲಾಗಿಂಗ್ ವೆಬ್'ಸೈಡ್ ಆಗಿರುವ ಟ್ವಿಟರ್'ನಲ್ಲಿ ಈ ಗೊಂದಲವನ್ನು ಪರಿಹರಿಸುವ ಯತ್ನ ಮಾಡಿದ್ದಾರೆ.
ಕೆಲದಿನಗಳಿಂದ ಯುಟಿಲಿಟಿ ಬಿಲ್(ವಿದ್ಯುತ್, ನೀರು, ಮೊಬೈಲ್) ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಸಿದರೆ ದುಪ್ಪಟ್ಟು GST ಹೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹಸ್ಮುಖ್ ಇದು ಕೇವಲ ಗಾಳಿಸುದ್ದಿ ಇಂತಹ ವಿಚಾರಗಳಿಗೆ ಗಮನ ನೀಡಬೇಡಿ ಎಂದು ಆಗ್ರಹಿಸಿ 'ಸಾಮಾಜಿಕ ಜಾಲಾತಾಣಗಳಲ್ಲಿ ಯುಟಿಲಿಟಿ ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಸಿದರೆ ದುಪ್ಪಟ್ಟು GST ಹೇರುತ್ತಾರೆ ಎಂಬ ತಪ್ಪು ಸಂದೇಶ ಹಬ್ಬುತ್ತಿದೆ. ಇದು ಸಂಪೂರ್ಣ ಸುಳ್ಳುಸುದ್ದಿ. ಇಂತಹ ಸುದ್ದಿ ರವಾನಿಸದಿರಿ' ಎಂದಿದ್ದಾರೆ.
ಇನ್ನು ಕ್ರೆಡಟ್ ಕಾರ್ಡ್ ವಿಚಾರದಲ್ಲಿ ಸಚಿವರು ಹೇಳಿದ ಮಾತು ನಿಜವೇ ಅಥವಾ ವೈರಲ್ ಆಗುತ್ತಿರುವ ಸುದ್ದಿ ನಿಜವೇ ಎಂದು ಕಾದು ನೋಡಬೇಕಷ್ಟೇ
