ವೀರಶೈವ ಮಹಾಸಭಾ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಅವಕಾಶ ನೀಡದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾಸಭಾ ಅಸ್ಥಿತ್ವ ಬರುವ ಸಾಧ್ಯತೆ ಹೆಚ್ಚಿದೆ. ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಇವತ್ತು ನಡೆಯಲಿರುವ ಮಹತ್ವದ ಸಭೆಯಲ್ಲಿ ತೀರ್ಮಾನವಾಗಲಿದೆ.
ಬೆಂಗಳೂರು(ಆ.10): ವೀರಶೈವ ಮಹಾಸಭಾ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಅವಕಾಶ ನೀಡದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾಸಭಾ ಅಸ್ಥಿತ್ವ ಬರುವ ಸಾಧ್ಯತೆ ಹೆಚ್ಚಿದೆ. ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಇವತ್ತು ನಡೆಯಲಿರುವ ಮಹತ್ವದ ಸಭೆಯಲ್ಲಿ ತೀರ್ಮಾನವಾಗಲಿದೆ.
ಇಬ್ಭಾಗವಾಗಲಿದೆಯಾ ವೀರಶೈವ ಮಹಾಸಭಾ?
ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಜೋರಾಗಿದೆ. ಲಿಂಗಾಯತರ ಒಂದು ಗುಂಪು ವೀರಶೈವ ಮತ್ತು ಲಿಂಗಾಯತ ಸೇರಿ ಪ್ರತ್ಯೇಕ ಧರ್ಮ ಮಾಡುವುದಾದರೆ ಸರಿ ಇಲ್ಲವಾದಲ್ಲಿ ಪ್ರತ್ಯೇಕ ಧರ್ಮವೇ ಬೇಡ ಅಂತಾ ಹೇಳಿದ್ದಾರೆ. ಇದೇ ವೇಳೆ, ವೀರಶೈವರನ್ನು ಹೊರತುಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮದ ಘೋಷಣೆಯಾಗಬೇಕು ಅಂತಾ ಇನ್ನೂ ಕೆಲವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಉಭಯ ಬಣಗಳಲ್ಲಿ ಈ ಸಂಬಂಧ ಕಾರ್ಯ ಚಟುವಟಿಕೆಗಳು ಜೋರಾಗಿ ನಡೆದಿದ್ದು, ವೀರಶೈವ ಮಹಾಸಭಾ ಇಬ್ಭಾಗದತ್ತ ಸಾಗಿದಂತಾಗಿದೆ..
ಅಸ್ತಿತ್ವಕ್ಕೆ ಬರಲಿದೆಯಾ ಪ್ರತ್ಯೇಕ ಲಿಂಗಾಯತ ಮಹಾಸಭಾ?
ಒಂದು ವೇಳೆ ವೀರಶೈವ ಮಹಾಸಭಾ, ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಬೆಂಬಲಿಸಬೇಕು. ಯಾಕೆಂದರೆ ಈ ಹಿಂದೆ ವೀರಶೈವ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಕೇಂದ್ರ ಎರಡು ಬಾರಿ ತಿರಸ್ಕರಿಸಿದೆ. ಇದೀಗ ಮತ್ತೆ ನಾವು ವೀರಶೈವ ಲಿಂಗಾಯತ ಧರ್ಮದ ಬೇಡಿಕೆ ಇಟ್ಟರೆ ಸಾವಿರ ವರ್ಷವಾದರೂ ಪ್ರತ್ಯೇಕ ಧರ್ಮದ ಸ್ಥಾನ-ಮಾನ ಸಿಗಲ್ಲ ಅನ್ನೋ ಅಸಮಾಧಾನವನ್ನ ಲಿಂಗಾಯತ ಮುಖಂಡರು ಹೊರಹಾಕಿದ್ದಾರೆ. ಆದ್ರಿಂದ ವೀರಶೈವ ಹೊರತುಪಡಿಸಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒಪ್ಪಿದರೆ ಸರಿ ಇಲ್ಲವಾದಲ್ಲಿ ವೀರಶೈವ ಮಹಾಸಭಾದಿಂದ ಹೊರಬಂದು ಪ್ರತ್ಯೇಕ ಲಿಂಗಾಯತ ಮಹಾಸಭಾ ಅಸ್ಥಿತ್ವಕ್ಕೆ ಬರಲಿದೆ ಅನ್ನೋ ಮಾತು ಕೇಳಿ ಬಂದಿವೆ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಇವತ್ತು ಮಹತ್ವದ ಸಭೆ
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹಾಗೂ ಲಿಂಗಾಯತ ಮಹಾಸಭಾವನ್ನು ಹುಟ್ಟುಹಾಕುವ ಬಗ್ಗೆ ಇವತ್ತು ನಡೆಯಲಿರುವ ಲಿಂಗಾಯತ ಮುಖಂಡರ ಮತ್ತು ಮಠಾಧೀಶರ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳಲಿದೆ. ಒಟ್ಟಿನಲ್ಲಿ ಪ್ರತ್ಯೇಕ ಧರ್ಮದ ಹೆಸರಲ್ಲಿ ವೀರಶೈವ ಮಹಾಸಭಾ ಅಸ್ಥಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರೆ, ಲಿಂಗಾಯತ ಮಹಾಸಭಾ ಉದಯದ ಕನಸು ಕಾಣುತ್ತಿದೆ.
