ಒಂದಾಗ್ತಾರಾ ವೀರಶೈವ, ಲಿಂಗಾಯತರು..?ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬ್ರೇಕ್​..?ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ ಎಸ್.ಎಂ. ಜಾಮದಾರ್ ಹೇಳಿದ್ದೇನು?‘ವೀರಶೈವ, ಲಿಂಗಾಯತ ಮಹಾಸಭಾ ಒಗ್ಗೂಡಲು ಸಿದ್ಧ’‘ವೀರಶೈವ ಮಹಾಸಭಾ ತನ್ನ ನಿಲುವು ಬದಲಿಸಿದರೆ ಒಂದಾಗಲು ಸಿದ್ಧ’‘ಸಚಿವ ಸ್ಥಾನ ಹಂಚಿಕೆಯಲ್ಲಿ ವೀರಶೈವ, ಲಿಂಗಾಯತರಿಗೆ ಅನ್ಯಾಯ ಮಾಡಲಾಗಿದೆ’ಒಗ್ಗಟ್ಟು ಪ್ರದರ್ಶಿಸಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ತೀರ್ಮಾನ

ಬೆಂಗಳೂರು(ಜೂ.10): ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣ ಗೋಚರವಾಗುತ್ತಿದೆ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳೊಂದಿಗೆ ಹೋರಾಟವನ್ನು ನಿಲ್ಲಿಸುವ ಸೂಚನೆಯನ್ನು ಹೋರಾಟಗಾರರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ ಎಸ್.ಎಂ. ಜಾಮದಾರ್, ವೀರಶೈವ ಮತ್ತು ಲಿಂಗಾಯತ ಮಹಾಸಭಾ ಒಗ್ಗೂಡಲು ಸಿದ್ದ ಎಂದು ಹೇಳಿದ್ದಾರೆ. ವೀರಶೈವ ಮಹಾಸಭಾ ತನ್ನ ನಿಲುವು ಬದಲಿಸಿದರೆ ಒಂದಾಗಲು ಸಿದ್ಧ ಎಂದಿರುವ ಅವರು, ಈಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ಹೆಸರು ಬದಲಿಸಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

"

ತಮ್ಮ ಬೇಡಿಕೆಯನ್ನು ಒಪ್ಪಿದರೆ ಒಗ್ಗಟ್ಟಿನಿಂದ ರಾಜಕೀಯ, ಧಾರ್ಮಿಕ ವಿಚಾರಗಳಿಗೆ ಒಂದಾಗಿ ಹೋರಾಡುತ್ತೇವೆ ಎಂದು ಜಾಮದಾರ್ ಹೇಳಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಹಂಚಿಕೆಯಲ್ಲಿ ವೀರಶೈವ, ಲಿಂಗಾಯತರಿಗೆ ಅನ್ಯಾಯ ಮಾಡಲಾಗಿದ್ದು, ಒಗ್ಗಟ್ಟು ಪ್ರದರ್ಶಿಸಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ತೀರ್ಮಾನಿಸಿರುವುದಾಗಿ ಅವರು ಸ್ಪಷ್ಟಪಡಿಸಿದರು.