ರಾಜರಾಜೇಶ್ವರಿ ನಗರದಲ್ಲಿ ಶಿಲ್ಪಾ ಗಣೇಶ್‌ಗೆ ಸಿಗುತ್ತಾ ಬಿಜೆಪಿ ಟಿಕೆಟ್?

First Published 5, Apr 2018, 12:03 PM IST
Will Shilpa Ganesh gets BJP ticket from Rajarajeshwari Nagara
Highlights

ಬೆಂಗಳೂರಿನ 14 ಕ್ಷೇತ್ರಗಳ ಸಭೆ  ಅಂತ್ಯಗೊಂಡಿದ್ದು, ಎಂಟು ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡದಿದೆ. ಶಿವಾಜಿನಗರಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರು ಪ್ರಸ್ತಾಪವಾಗಿದೆ.

ಯಲಹಂಕ: ಬೆಂಗಳೂರಿನ 14 ಕ್ಷೇತ್ರಗಳ ಸಭೆ  ಅಂತ್ಯಗೊಂಡಿದ್ದು, ಎಂಟು ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡದಿದೆ. ಶಿವಾಜಿನಗರಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರು ಪ್ರಸ್ತಾಪವಾಗಿದ್ದು, ಗೋವಿಂದರಾಜನಗರದಲ್ಲಿ ವಿ.ಸೋಮಣ್ಣ, ಸೋಮಣ್ಣ ಶಿಷ್ಯ ಉಮೇಶ್ ಶೆಟ್ಟಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ಬೆಂಗಳೂರು ಕ್ಷೇತ್ರದ ಸಭೆ ಅಂತ್ಯ, 14 ಕ್ಷೇತ್ರಗಳ ಸ್ಕ್ರೀನಿಂಗ್ ಪೂರ್ಣ ಗೊಂಡಿದೆ.  ನಿನ್ನೆ 14 ಕ್ಷೇತ್ರಗಳ ಸ್ಕ್ರೀನಿಂಗ್ ಮಾಡಲಾಗಿತ್ತು.


ಕ್ಷೇತ್ರ ಹಾಗೂ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೀಗಿದೆ...
- ಮಹಾಲಕ್ಷ್ಮಿ ಲೇಔಟ್ - ಹರೀಶ್/ ನೆ.ಲ.ನರೇಂದ್ರ ಬಾಬು/ ನಾಗರಾಜ್

- ಸರ್ವಜ್ಞ ನಗರ- ಪದ್ಮನಾಭ  ರೆಡ್ಡಿ/ ಎಂ.ಎನ್.ರೆಡ್ಡಿ

- ಗೋವಿಂದರಾಜನಗರ- ವಿ‌.ಸೋಮಣ್ಣ/ ಉಮೇಶ್ ಶೆಟ್ಟಿ

- ವಿಜಯನಗರ- ರವೀಂದ್ರ/ ಅಶ್ವಥ್ ನಾರಾಯಣ್ 

- ಚಾಮರಾಜಪೇಟೆ- ಲಹರಿ ವೇಲು/ ಲಕ್ಷ್ಮೀನಾರಾಯಣ/ ಗಣೇಶ್ 

- ಬಿ.ಟಿ.ಎಂ.ಲೇಔಟ್- ಲಲ್ಲೇಶ್ ರೆಡ್ಡಿ/ ವಿವೇಕ್ ರೆಡ್ಡಿ/ ಜಯದೇವ

- ಬ್ಯಾಟರಾಯನಪುರ- ರವಿ/ ರಾಜಗೋಪಾಲ್/ ಮುನೀಂದ್ರ ಕುಮಾರ್  

- ಶಾಂತಿನಗರ- ವಾಸುದೇವ್ ಮೂರ್ತಿ/ ಬಿ.ಎನ್.ಎಸ್ ರೆಡ್ಡಿ/ ಶ್ರೀಧರ್ 

- ರಾಜರಾಜೇಶ್ವರಿನಗರ- ಮುನಿರಾಜುಗೌಡ/ ಶಿಲ್ಪಾ ಗಣೇಶ್ 

- ಗಾಂಧಿನಗರ-  ಶಿವಕುಮಾರ್/ ಸಪ್ತಗಿರಿಗೌಡ

- ಪುಲಿಕೇಶಿ ನಗರ- ಮುನಿಕೃಷ್ಣ/ ಸೋಮಶೇಖರ್ ( ಜಿಮ್ ಸೋಮು)

- ಶಿವಾಜಿನಗರ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು

- ಚಿಕ್ಕಪೇಟೆ- ಉದಯ್ ಗರುಡಚಾರ್/ ಎನ್.ಆರ್.ರಮೇಶ್

- ಆನೇಕಲ್ - ನಾರಾಯಣಸ್ವಾಮಿ

loader