Asianet Suvarna News Asianet Suvarna News

ಸಚಿವ ಸ್ಥಾನ ತೊರೆಯುತ್ತಾರಾ ರಮೇಶ್ ಜಾರಕಿಹೊಳಿ..?

ಕಳೆದ ಬಾರಿ ನನಗೆ ಸಚಿವ ಸ್ಥಾನ ಕೈತಪ್ಪಿದ್ದ ವೇಳೆ ನಾನು ಆಕ್ಷೇಪ ವ್ಯಕ್ತಪಡಿಸದೆ ಸುಮ್ಮನಿದ್ದೆ. ಯಾರಾದರೂ ಮಧ್ಯಸ್ಥಿಕೆ ವಹಿಸು ವುದಾದರೆ ಈಗ ನಾನು ಸಚಿವ ಸ್ಥಾನವನ್ನು ಸಹೋದರನಿಗೆ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

will Ramesh Jarkiholi quit Ministerial Post

ಬೆಂಗಳೂರು :  ಸಹೋದರ ಸತೀಶ್ ಜಾರಕಿಹೊಳಿಗಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ. ಕಾಂಗ್ರೆಸ್ ಸಮುದ್ರ ವಿದ್ದಂತೆ. ಇಲ್ಲಿ ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಅವರು ಗುರುವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಸತೀಶ್, ರಮೇಶ್ ಅವರಿಗಿಂತ ಪಕ್ಷ ದೊಡ್ಡದು. ಈ ಸಮ್ಮಿಶ್ರ ಸರ್ಕಾರದಲ್ಲಿ ಕೆಲವರಿಗೆ ಸಚಿವ ಸ್ಥಾನ ದೊರೆತಿಲ್ಲ. ಇದರಿಂದ ಸಹಜವಾಗಿಯೇ ಗೊಂದಲ ಸೃಷ್ಟಿಯಾಗಿದೆ. ಒಂದು ವಾರದಲ್ಲಿ ಎಲ್ಲವೂ ಸರಿಯಾಗ ಲಿದೆ ವಿಶ್ವಾಸ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರ ರಾಜ್ಯದ ಜನತೆಯ ನಿರೀ ಕ್ಷೆಯಂತೆಯೇ ಕೆಲಸ ಮಾಡಲಿದೆ. ಪ್ರಜಾಪ್ರ ಭುತ್ವದಲ್ಲಿ ಎಲ್ಲರಿಗೂ ಅಧಿಕಾರಬೇಕು. ಆದರೆ, ಸಂದರ್ಭಕ್ಕೆ ಅನುಸಾರ ತ್ಯಾಗ ಮನೋಭಾವವೂ ಇರಬೇಕು. ಈ ಬಾರಿ ಸತೀಶ್ ಸಚಿವ ಸ್ಥಾನ ಕೇಳಿದ್ದರು. ಆದರೆ, ನನಗೆ ದೊರೆತಿದೆ. 
 
ಕಳೆದ ಬಾರಿ ನನಗೆ ಸಚಿವ ಸ್ಥಾನ ಕೈತಪ್ಪಿದ್ದ ವೇಳೆ ನಾನು ಆಕ್ಷೇಪ ವ್ಯಕ್ತಪಡಿಸದೆ ಸುಮ್ಮನಿದ್ದೆ. ಯಾರಾದರೂ ಮಧ್ಯಸ್ಥಿಕೆ ವಹಿಸು ವುದಾದರೆ ಈಗ ನಾನು ಸಚಿವ ಸ್ಥಾನವನ್ನು ಸಹೋದರನಿಗೆ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು. ಸಚಿವ ಸ್ಥಾನ ಕೈತಪ್ಪಿದ್ದರಿಂದ ಸತೀಶ್ ಹಿಂಬಾಲಕರು ಪ್ರತಿಭಟನೆ ಮಾಡಿದ್ದಾರೆ. 

ಸತೀಶ್ ಅವರೊಬ್ಬ ಅನುಭವಿ, ಹಿರಿಯ ರಾಜಕಾರಣಿ. ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಅವರು ರಾಜಿನಾಮೆ ನೀಡಿರುವುದು ವದಂತಿಯಷ್ಟೆ. ಇನ್ನು ಸತೀಶ್ ಮನವೊಲಿಸಲು ಅವರೇನೂ ಸಣ್ಣ ಹುಡುಗನಲ್ಲ. ರಾಜಕೀಯದಲ್ಲಿ ಪ್ರಭುದ್ಧರಾಗಿರುವ ಅವರು ಸದ್ಯದ ರಾಜಕೀಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

Follow Us:
Download App:
  • android
  • ios