ಹುಬ್ಬಳ್ಳಿ (ಜ.26): ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರಾಗಿ ನೇಮಿಸಿರುವುದಕ್ಕೆ  ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವನಾಥ್ ಶೆಟ್ಟಿಯವರ ವಿರುದ್ಧ ಗಂಭೀರ ಆರೋಪಗಳಿವೆ. ವಿಶ್ವನಾಥ್ ಶೆಟ್ಟಿಯವರಿಗೆ ನ್ಯಾಯಾಂಗದ ಮೇಲೆ ಗೌರವವಿದ್ದರೆ ಲೋಕಾಯುಕ್ತರಾಗಲು ಒಪ್ಪಬಾರದು ಎಂದು ಹೇಳಿದ್ದಾರೆ. 

ಆಯ್ಕೆ ಸಮಿತಿಯವರು ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಗೆ ಆದ್ಯತೆ ಕೊಡಬೇಕಿತ್ತು. ಈ ಬಗ್ಗೆ  ರಾಜ್ಯಪಾಲರು ತಮ್ಮ ಹುದ್ದೆಗೆ ಗೌರವ ತರುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇಲ್ಲ, ಅವರೇ ಸ್ವಯಂ ಪ್ರೇರಣೆಯಿಂದ ಲೋಕಾಯುಕ್ತ ಹುದ್ದೆಯನ್ನು ತ್ಯಜಿಸಬೇಕು. ಅವರಿಗೆ ಗೌರವಾನ್ವಿತ ಲೋಕಾಯುಕ್ತ ಸ್ವೀಕರಿಸುವ ನೈತಿಕತೆ ಇಲ್ಲ, ಎಂದು ವಾಗ್ದಾಳಿ ನಡೆಸಿದ್ದಾರೆ.

ಅವರು ಈವರೆಗೆ ಮಾಡಿರುವ ಅಕ್ರಮ ಆಸ್ತಿಯನ್ನು ಸರ್ಕಾರಕ್ಕೆ ವಾಪಸ್ಸು ಕೊಡಬೇಕು. ಇಲ್ಲದಿದ್ದಾರೆ ವಿಶ್ವನಾಥ್ ಶೆಟ್ಟಿ ನೇಮಕ ಪ್ರಶ್ನಿಸಿ ಸುಪ್ರೀಮ್‍ ಕೋಟ್೯’‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.