ವಾಷಿಂಗ್ಟನ್ (ಆ.02): ‘ಇಸ್ಲಾಮಿಕ್ ಭಯೋತ್ಪಾದನೆ’ ಎಂಬ ಶಬ್ದ ಬಳಸುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಮರ್ಥಿಸಿಕೊಂಡಿದ್ದಾರೆ.

ಇಸ್ಲಾಂ ಅನ್ನು ಉಗ್ರವಾದದ ಜೊತೆ ಸೇರಿಸಲು ಯಾವುದೇ ಧಾರ್ಮಿಕ ಆಧಾರಗಳಿಲ್ಲ. ಅಲ್‌ ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್‌ನಂಥ ಉಗ್ರ ಸಂಘಟನೆಗಳು ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಇಸ್ಲಾಂ ಅನ್ನು ಬಳಸುತ್ತಿವೆಯಷ್ಟೆ ಎಂದು ಅವರು ವರ್ಜೀನಿಯಾದಲ್ಲಿ ಹೇಳಿದ್ದಾರೆ.

ಆದರೆ ಯಾವುದೇ ಧರ್ಮವು ಮಕ್ಕಳನ್ನು ಕೊಲ್ಲುವುದನ್ನು ಮತ್ತು ಲೈಂಗಿಕ ದಾಸಿಯರನ್ನು ಹೊಂದುವುದನ್ನು ಸಮರ್ಥಿಸುವುದಿಲ್ಲ ಎಂದಿದ್ದಾರೆ.