ಕಾಮಪುರ, ಅಸ್ಸಾಂ (ಸೆ.29): ದೇಶವನ್ನು ವಿಭಜಿಸುವ ಆರ್‌ಎಸ್‌ಎಸ್‌ ಮತ್ತು ಆ ಬಗೆಯ ಇತರ ಸಂಘಟನೆಗಳ ಸಿದ್ಧಾಂತಕ್ಕೆ ನನ್ನ ವಿರೋಧವಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಆರ್‌ಎಸ್‌ಎಸ್‌ ವಿರುದ್ಧದ ತನ್ನ ಹೇಳಿಕೆಗಾಗಿ ದಾಖಲಿಸಲ್ಪಟ್ಟಿರುವ ಮಾನನಷ್ಟ ದಾವೆಯ ಸಂಬಂಧ ಇಂದು ಅಸ್ಸಾಂ ಕೋರ್ಟಿನಲ್ಲಿ ಹಾಜರಾದ ಬಳಿಕ ರಾಹುಲ್‌ ಗಾಂಧಿ ಮಾತನಾಡಿದರು.

"ನಾನು ಬಡವರು, ರೈತರು ಮತ್ತು ನಿರುದ್ಯೋಗಿಗಳ ಪರವಾಗಿ ಹೋರಾಡುತ್ತಿರುವುದರಿಂದ ನನ್ನ ವಿರುದ್ಧ ಈ ಬಗೆಯ ಕೇಸುಗಳನ್ನು ಹೂಡಲಾಗುತ್ತಿದೆ; ಆದರೆ ನಾನು ಈ ರೀತಿಯ ಕೇಸುಗಳಿಂದ ಹೆದರುವವನಲ್ಲ; ನನ್ನ ಹೋರಾಟವನ್ನು ನಾನು ಮುಂದುವರಿಸುವೆ' ಎಂದು ರಾಹುಲ್‌ ಗುಡುಗಿದರು.