'ಕಾವೇರಿ'ಯೂ ಸಿದ್ದರಾಮಯ್ಯ ಕೈ ತಪ್ಪುತ್ತಾ?

Will Kaveri house remain to ex CM Siddaramaih?
Highlights

ಕಾವೇರಿ ನಿವಾಸ ಹೊರ ಬರಲಿದ್ದಾರಾ ಸಿದ್ದು?

ಸಿಎಂ ಸ್ಥಾನದಿಂದ ಕೆಳಗಿಳಿದರೂ ಮನೆ ಬಿಟ್ಟಿಲ್ಲ

ಸಚಿವ ಜಾರ್ಜ್ ಪಾಲಿಗೆ ಒಲಿಯಲಿದೆ ಕಾವೇರಿ?

ಜಾರ್ಜ್ ಕಾವೇರಿಯನ್ನು ಸಿದ್ದುಗೇ ಬಿಟ್ಟು ಕೊಡುತ್ತಾರಾ?

ಬೆಂಗಳೂರು(ಜು.12): ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೆಚ್ಚಿನ ಸರ್ಕಾರಿ ನಿವಾಸ ಕಾವೇರಿ ಇದೀಗ ಅವರ ಪಾಲಿಗೆ ಬಂದಿಲ್ಲ. ನೂತನ ಸರ್ಕಾರ ರಚನೆ ಬಳಿಕ ಕಾವೇರಿ ಸಚಿವ ಕೆ.ಸಿ. ಜಾರ್ಜ್  ಪಾಲಿಗೆ ಒಲಿದಿದೆ.

ಆದರೆ ಸಿಎಂ ಸ್ಥಾನದಿಂದ ಕೆಳಗಿಳಿದರೂ ಸಿದ್ದು ಇನ್ನೂ ಕಾವೇರಿ ನಿವಾಸ ಖಾಲಿ ಮಾಡಿಲ್ಲ. ಈ ನಿವಾಸದ ಮೇಲೆ ಡಿಸಿಎಂ ಪರಮೇಶ್ವರ್ ಕೂಡ ಕಣ್ಣು ಹಾಕಿದ್ದರು ಎಂದು ಹೇಳಲಾಗುತ್ತಿದೆ.

ಆದರೆ ಅಂತಿಮವಾಗಿ ಕಾವೇರಿ ನಿವಾಸ ಸಚಿವ ಕೆ.ಸಿ. ಜಾರ್ಜ್ ಅವರಿಗೆ ನೀಡಲಾಗಿದೆ.ಈ ಕುರಿತು ಇನ್ನೆರಡು ದಿನಗಳಲ್ಲಿ ಶಿಷ್ಟಾಚಾರ ಇಲಾಖೆಯಿಂದ ಅಧಿಕೃತ  ಪ್ರಕಟಣೆ ಕೂಡ ಹೊರಬೀಳಲಿದೆ.

ಆದರೆ ಒಂದು ವೇಳೆ ಕಾವೇರಿ ನಿವಾಸ ಜಾರ್ಜ್ ಅವರಿಗೆ ಒಲಿದರೆ ಅದನ್ನು ಅವರು ಸಿದ್ದರಾಮಯ್ಯ ಅವರಿಗೇ ಮರಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಸಿದ್ದು ಮತ್ತೆ ಕಾವೇರಿಯಲ್ಲೇ ಉಳಿಯಲಿದ್ದಾರಾ ಅಥವಾ ಕಾವೇರಿ ಬಿಟ್ಟು ಹೊರ ಬರಲಿದ್ದಾರಾ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. 

loader