ಪ್ರವಾಸಿಗರಿಗೆ ಮತ್ತೊಬ್ಬ ಗೋವಾ ಸಚಿವರ ಎಚ್ಚರಿಕೆ

First Published 12, Feb 2018, 9:45 AM IST
Will Chase Away Tourists Who Dont Respect Goan Culture
Highlights

ಭಾರತೀಯ ಪ್ರವಾಸಿಗರನ್ನು ಕೊಳಕರು ಎಂದು ಸಚಿವ ವಿಜಯ್ ಸರ್‌ದೇಸಾಯಿ ದೂಷಿಸಿ ಟೀಕೆಗೊಳಗಾದ ಬೆನ್ನಲ್ಲೇ, ಗೋವಾದ ಮತ್ತೋರ್ವ ಸಚಿವರು ಪ್ರವಾಸಿಗರ ವಿರುದ್ಧ ಹರಿಹಾಯ್ದಿದ್ದಾರೆ. 

ಪಣಜಿ: ಭಾರತೀಯ ಪ್ರವಾಸಿಗರನ್ನು ಕೊಳಕರು ಎಂದು ಸಚಿವ ವಿಜಯ್ ಸರ್‌ದೇಸಾಯಿ ದೂಷಿಸಿ ಟೀಕೆಗೊಳಗಾದ ಬೆನ್ನಲ್ಲೇ, ಗೋವಾದ ಮತ್ತೋರ್ವ ಸಚಿವರು ಪ್ರವಾಸಿಗರ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸಂಸ್ಕೃತಿಯನ್ನು ಪಾಲಿಸಿದ ಪ್ರವಾಸಿಗರನ್ನು ನಾವು ಇಲ್ಲಿಂದ ಓಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಆಯೋಜಿತವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋವಾದ ಪ್ರವಾಸೋದ್ಯಮ ಖಾತೆ ಸಚಿವ ಮನೋಹರ್ ಅಜ್ಗಾಂವ್ಕರ್, ‘ಇಲ್ಲಿಗೆ ಬರುವ ಪ್ರವಾಸಿಗರು ಗೋವಾ ಸಂಸ್ಕೃತಿ ಮತ್ತು ಗೋವನ್ನರನ್ನು ಗೌರವಿಸಬೇಕು. ಪ್ರವಾಸಿಗರು ಇಲ್ಲಿಗೆ ಬಂದು ಮಾದಕವಸ್ತುಗಳನ್ನು ಮಾರುವುದನ್ನು ನಾವು ಸಹಿಸುವುದಿಲ್ಲ.

ನಮ್ಮ ಸಂಸ್ಕೃತಿಯನ್ನು ಒಪ್ಪದವರನ್ನು ನಾವು ಓಡಿಸಲು ಹಿಂಜರಿಯುವುದಿಲ್ಲ. ಈ ವಿಷಯದಲ್ಲಿ ನಾವು ಯಾರ ಮಾತನ್ನೂ ಆಲಿಸುವುದಿಲ್ಲ. ನಮ್ಮ ಸಂಸ್ಕೃತಿ ಕುರಿತಂತೆ ನಮ್ಮ ನಿಲುವು ಸ್ಪಷ್ಟವಿದೆ’ ಎಂದು ಹೇಳಿದ್ದಾರೆ.

loader