Asianet Suvarna News Asianet Suvarna News

ನಾನು ರಾಜಕೀಯಕ್ಕೆ ಬಂದರೆ 3ನೇ ಮಹಾಯುದ್ಧವಾಗುತ್ತೆ : ನೂಯಿ

ತಾವು ರಾಜಕೀಯಕ್ಕೆ ಸೇರ್ಪಡೆಯಾದರೆ ಮೂರನೇ ಮಹಾಯುದ್ಧವೇ ಆಗುತ್ತದೆ ಎಂದು ಪೆಪ್ಸಿಕೋ ಕಂಪನಿಯ ಮಾಜಿ  ಸಿಇಒ ಇಂದಿರಾ ನೂಯಿ ಹೇಳಿದ್ದಾರೆ.

Will Cause A Third World War If I Join Politics Says Indra Nooyi
Author
Bengaluru, First Published Oct 10, 2018, 2:36 PM IST
  • Facebook
  • Twitter
  • Whatsapp

ನ್ಯೂಯಾರ್ಕ್:  ತಾವು ರಾಜಕೀಯಕ್ಕೆ ಸೇರ್ಪಡೆಯಾದರೆ ಮೂರನೇ ಮಹಾಯುದ್ಧವೇ ಆಗುತ್ತದೆ ಎಂದು  ಪೆಪ್ಸಿಕೊ ಕಂಪನಿಯ ಮಾಜಿ ಸಿಇಒ ಭಾರತೀಯ ಸಂಜಾತೆ ಇಂದಿರಾ ನೂಯಿ ಹೇಳಿದ್ದಾರೆ. 

62  ವರ್ಷದ ಇಂದಿರಾ ನೂಯಿ ಅವರು ನ್ಯೂಯಾರ್ಕ್ ನಲ್ಲಿ  ಗೇಮ್ ಚೇಂಜರ್ ಆಫ್ ದಿ ಇಯರ್ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ  ಅವರು ಈ ವಿಚಾರ ಹೇಳಿದ್ದಾರೆ. 

 ವ್ಯಾವಹಾರಿಕ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆಯನ್ನು ಪರಿಗಣಿಸಿ ಮಹಿಳೆಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 

ಪ್ರಶಸ್ತಿ ಸ್ವೀಕಾರ ಮಾಡಿದ ವೇಳೆ ನೀವು ಡೊನಾಲ್ಡ್ ಟ್ರಂಪ್ ಅವರ ಸಂಪುಟವನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆಯಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು ನಾನೆಂದಿಗೂ ರಾಜಕೀಯವನ್ನು ನನ್ನ ಜೀವನದೊಂದಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ನನಗೆ ರಾಜಕೀಯದ ಬಗ್ಗೆ ಯಾವುದೇ ವಿಚಾರವೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಕಳೆದ 40 ವರ್ಷಗಳಿಂದ ದುಡಿಮೆ ಮಾಡಿದ್ದು ಇದೀಗ ತಮಗೆ ಸ್ವಲ್ಪ ಸಮಯವನ್ನು ಮೀಸಲಿಡಬೇಕಿದೆ ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೇ ಪೆಪ್ಸಿಕೋ ಸಿಇಒ ಸ್ಥಾನದಿಂದ ಅವರು ಇಳಿದಿದ್ದರು. ಒಟ್ಟು 12 ವರ್ಷಗಳ ಕಾಲ ಪೆಪ್ಸಿಕೊ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

Follow Us:
Download App:
  • android
  • ios