ಪಣಜಿ[ಆ.07]: ವಿಶೇಷಾಧಿಕಾರವನ್ನು ರದ್ದು ಪಡಿಸಿದ ಬೆನ್ನಲ್ಲೇ ಗೋವಾದ ಸಚಿವರೊಬ್ಬರು ಜಮ್ಮು ಕಾಶ್ಮೀರದಲ್ಲಿ ನಿವೃತ್ತಿಯ ಜೀವನಕ್ಕೆ ಮನೆಯೊಂದನ್ನು ಕಟ್ಟಿಕೊಳ್ಳಲು ಭೂಮಿ ಖರೀದಿಸುವುದಾಗಿ ಹೇಳಿದ್ದಾರೆ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದು ಪಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ನಿರ್ಧಾರವನ್ನು ರಾಜ್ಯಸಭೆಯಲ್ಲಿ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ಬಂದರು ಸಚಿವ ಮೈಕೆಲ್‌ ಲೋಬೊ, ತಮ್ಮ ರಾಜಕೀಯ ನಿವೃತ್ತಿಯ ಜೀವನವನ್ನು ಕಾಶ್ಮೀರದಲ್ಲಿ ಕಳೆಯುತ್ತೇನೆ. ಕಾಶ್ಮೀರದಲ್ಲೇ ಸ್ವಂತ ಮನೆ ಕಟ್ಟಿಕೊಳ್ಳಲು ಭೂಮಿಯನ್ನು ಖರೀದಿಸುವ ಬಗ್ಗೆ ಯೋಚಿಸಿದ್ದೇನೆ. ನನ್ನೆಲ್ಲಾ ಶಾಸಕ ಮಿತ್ರರನ್ನು ಆಹ್ವಾನಿಸುತ್ತೇನೆ ಎಂದು ಹೇಳಿದ್ದಾರೆ.

35ಎ ರದ್ದು ಬೆನ್ನಲ್ಲೇ, ಕಾಶ್ಮೀರದಲ್ಲಿ ಮೊದಲ ಕೈಗಾರಿಕೆ ಸ್ಥಾಪನೆಗೆ ಆಫರ್‌!

ಕೇಂದ್ರ ಸರ್ಕಾರ ಈ ನಿರ್ಧಾರದಿಂದ ನಮ್ಮ ಕನಸಿಗೆ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.