ಇವಿಎಂಗಳಲಲ್ಲಿ ವಂಚನೆ ನಡೆದಿರುವುದು ಉತ್ತರ ಪ್ರದೇಶದ ಜನತೆಗೆ ಗೊತ್ತಾಗಿದೆ.  ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ, ಮುಂದಿನ 2-3 ದಿನಘಲಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.

ನವದೆಹಲಿ (ಮಾ.20): ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ)ನಲ್ಲಾಗುತ್ತಿರುವ ವಂಚನೆ ವಿರುದ್ಧ ಮುಂದಿನ ಎರಡು ಮೂರು ದಿನಗಳಲ್ಲಿ ನ್ಯಾಯಾಲಯದ ಮೊರೆಹೋಗುವುದಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಪುನರುಚ್ಚರಿಸಿದ್ದಾರೆ.

ಇವಿಎಂಗಳಲಲ್ಲಿ ವಂಚನೆ ನಡೆದಿರುವುದು ಉತ್ತರ ಪ್ರದೇಶದ ಜನತೆಗೆ ಗೊತ್ತಾಗಿದೆ.ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ, ಮುಂದಿನ 2-3 ದಿನಘಲಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.

ಬಿಎಸ್ಪಿ ನಾಯಕನ ಹತ್ಯೆ:

ಭಾನುವಾರ ರಾತ್ರಿ ಬಿಎಸ್ಪಿ ನಾಯಕ ಮೊಹಮ್ಮದ್ ಶಮಿ ಅವರನ್ನುಅಲಹಾಬಾದ್’ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಯಾವತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಲಿ ಅಥವಾ ಅಭಿವೃದ್ಧಿಯನ್ನು ಸಾಧಿಸುವುದಾಗಲಿ ಹೊಸ ಸರ್ಕಾರದಿಂದ ಸಾಧ್ಯವಿಲ್ಲ; ಅದು ಆರೆಸ್ಸೆಸ್ ಏಜೆಂಡಾವನ್ನು ಜಾರಿಗೊಳಸಬಹುದಷ್ಟೇ ಎಂದು ಹೇಳಿದ್ದಾರೆ.