ಮಾಧ್ಯಮಗಳ ಜೊತೆ ಉತ್ತಮ ಸಂಬಂಧ ಹೊಂದಿರದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅತ್ಯಂತ ಅಪ್ರಾಮಾಣಿಕ ಮತ್ತು ಭ್ರಷ್ಟ’ ಮಾಧ್ಯಮ ಪ್ರಶಸ್ತಿಯನ್ನು ಮುಂದಿನವಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ವಾಷಿಂಗ್ಟನ್ (ಜ.04): ಮಾಧ್ಯಮಗಳ ಜೊತೆ ಉತ್ತಮ ಸಂಬಂಧ ಹೊಂದಿರದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅತ್ಯಂತ ಅಪ್ರಾಮಾಣಿಕ ಮತ್ತು ಭ್ರಷ್ಟ’ ಮಾಧ್ಯಮ ಪ್ರಶಸ್ತಿಯನ್ನು ಮುಂದಿನವಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ಅಮೆರಿಕದ ಪ್ರಮುಖ ಮಾಧ್ಯಮಗಳಾದ ಸಿಎನ್‌ಎನ್, ಎಬಿಸಿ ನ್ಯೂಸ್, ದ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್'ಗಳನ್ನು ‘ನಕಲಿ’ ಮಾಧ್ಯಮಗಳು ಎಂದು ಟ್ರಂಪ್ ಕರೆದಿದ್ದಾರೆ. ‘ನಾನು ವರ್ಷದ ಅತ್ಯಂತ ಅಪ್ರಾಮಾಣಿಕ ಮತ್ತು ಭ್ರಷ್ಟ ಮಾಧ್ಯಮ ಪ್ರಶಸ್ತಿಯನ್ನು ಸೋಮವಾರ 5 ಗಂಟೆಗೆ ಪ್ರಕಟಿಸಲಿದ್ದೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Scroll to load tweet…