ಆಧಾರ್ ಬಗ್ಗೆ ಪರ-ವಿರೊಧ ಚರ್ಚೆಗಳು ನಡೆಯುತ್ತಿರುವಾಗಲೇ ವಿಕಿಲೀಕ್ಸ್ ಸ್ಫೋಟಕ ವಿಷಯವನ್ನು ಬಹಿರಂಗಪಡಿಸಿದೆ. ಬೇಹುಗಾರಿಕಾ ತಂತ್ರಜ್ಞಾನಗಳನ್ನು ಬಳಸಿ ಅಮೆರಿಕಾದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಿಲೆಜೆನ್ಸ್ ಏಜನ್ಸಿಯು (CIA) ಭಾರತೀಯರ ಆಧಾರ್ ವಿವರಗಳನ್ನು ಪಡೆದಿದೆ ಎಂದು ಹೇಳಲಾಗಿದೆ.

ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಎಂಬ ಸಂಸ್ಥೆಯು ಅಬಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ಸಿಐಏಯು ಬಳಸುತ್ತಿದೆ. ಆಘಾತಕಾರಿ ವಿಷಯವೆಂದರೇ, ಅದೇ ಸಂಸ್ಥೆ ಭಾರತದ ಆಧಾರ್ ಯೋಜನೆಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಒದಗಿಸಿದೆ. ಆದುದರಿಂದ ಭಾರತೀಯರ ಆಧಾರ್ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.
ಭಾರತೀಯರ ಆಧಾರ್ ಮಾಹಿತಿಯನ್ನು ಸಿಐಏ ಕಳುವು ಮಾಡಿದೆಯೇ? ಎಂದು ವಿಕಿಲೀಕ್ಸ್ ಶುಕ್ರವಾರ ಟ್ವೀಟಿಸಿ ಲೇಖನವೊಂದರ ಕೊಂಡಿಯನ್ನು ಪೋಸ್ಟ್ ಮಾಡಿದೆ. ಇನ್ನೊಂದು ಟ್ವೀಟಿನಲ್ಲಿ, 'ಬೇಹುಗಾರರ ಕೈಯಲ್ಲಿ ಆಧಾರ್' ಎಂಬ ಲೇಖನವನ್ನು ಪೋಸ್ಟ್ ಮಾಡಿದೆ.
ಆದರೆ ಈ ವರದಿಗಳನ್ನು ಆಧಾರರಹಿತವೆಂದು ಸರ್ಕಾರವು ಹೇಳಿದೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರದಿಗಳಿಗೆ ಯಾವುದೇ ಆಧಾರವಿಲ್ಲ. ಆಧಾರ್ ಮಾಹಿತಿಯು ಸುರಕ್ಷಿತವಾಗಿದೆ. ಯಾರೂ ಅದನ್ನು ಪಡೆಯುವ ಹಾಗಿಲ್ಲವೆಂದು ಹೇಳಿದೆ.