ಕಳೆದ 53 ದಿನಗಳಿಂದ ಗೃಹಿಣಿ ಕರುಣಾಶ್ರೀ ಮನೆಯ ಜಗಲಿ ಮೇಲೆ ವಾಸವಿದ್ದು, ಇಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದಾಳೆ
ಮೈಸೂರು (ಅ.20): ಮನೆಗೆ ಸೇರಿಸಿಕೊಳ್ಳಿ ಎಂದು 53 ದಿನಗಳಿಂದ ಗೃಹಿಣಿಯೊಬ್ಬಳು ಪತಿ ಮನೆ ಮುಂದೆ ಅಹೋರಾತ್ರಿ ಧರಣಿ ಕುಳಿತುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ವಿಜಯನಗರ 3ನೇ ಹಂತದಲ್ಲಿರುವ ಮುರುಳಿ ಎಂಬುವರ ಮನೆ ಮುಂದೆ ಆತನ ಪತ್ನಿ ಕರುಣಾಶ್ರೀ ಧರಣಿ ಕುಳಿತಿದ್ದಾರೆ.
ಇಷ್ಟಾದರೂ ಗಂಡನ ಮನೆಯವರಿಗೆ ಕಿಂಚಿತ್ತೂ ಕರುಣೆ ಬಂದಿಲ್ಲ. ಕಳೆದ 53 ದಿನಗಳಿಂದ ಗೃಹಿಣಿ ಕರುಣಾಶ್ರೀ ಮನೆಯ ಜಗಲಿ ಮೇಲೆ ವಾಸವಿದ್ದು, ಇಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದಾಳೆ.
53 ದಿನದಿಂದಲೂ ಪೊಲೀಸರು ಕೂಡ ಇಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನೂ ತನ್ನ ಗಂಡನಿಗೆ ಶಾಸಕರೊಬ್ಬರ ಸಹಕಾರವಿದೆ ಎಂದು ಕಾರುಣ್ಯಶ್ರೀ ಆರೋಪಿಸಿದ್ದಾರೆ.
