ಸ್ವಲ್ಪ ದಿನ ಮಾತ್ರ ಪತ್ನಿಯೊಂದಿಗೆ ಚೆನ್ನಾಗಿದ್ದ ಪತಿ ಹಾಗೂ ಅತ್ತೆ, ಮಾವ ಇಲ್ಲದ ಕ್ಯಾತೆ ತೆಗೆದು ತವರು ಮನೆ ಕಳುಹಿಸಿದ್ರು.

ಮೈಸೂರಿನ ಪಿರಿಯಾಪಟ್ಟಣದಲ್ಲಿ ಪತಿ ಮನೆ ಎದುರು ಕಳೆದ 54 ದಿನಗಳಿಂದ ನೊಂದ ಪತ್ನಿ ಧರಣಿ ನಡೆಸುತ್ತಿದ್ದಾಳೆ 2011ರಲ್ಲಿ ಮುರುಳಿ ಎಂಬಾತನೊಂದಿಗೆ ಕರುಣಾಶ್ರೀ ವಿವಾಹವಾಗಿತ್ತು. ಸ್ವಲ್ಪ ದಿನ ಮಾತ್ರ ಪತ್ನಿಯೊಂದಿಗೆ ಚೆನ್ನಾಗಿದ್ದ ಪತಿ ಹಾಗೂ ಅತ್ತೆ, ಮಾವ ಇಲ್ಲದ ಕ್ಯಾತೆ ತೆಗೆದು ತವರು ಮನೆ ಕಳುಹಿಸಿದ್ರು. ಬಳೀಕ ಕರುಣಾಶ್ರೀಯನ್ನು ಮನೆಗೆ ಸೇರಿಸಿಕೊಳ್ಳದೆ ಆಟವಾಡಿಸುತ್ತಾ ಬಂದರು. ಎಷ್ಟೇ ಗೋಗರೆದರೂ, ಮನವಿ ಮಾಡಿದರೂ ಮನೆಯಲ್ಲಿ ಇರಿಸಿಕೊಳ್ಳಲಿಲ್ಲ. ಇದೇ ರೀತಿ ನಾಲ್ಕು ವರ್ಷ ಕಾಲ ಬದುಕು ಸಾಗಿಸಿದ ಕರುಣಾಶ್ರೀ ಆಗಸ್ಟ್​ 25ರಂದು ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ಗಂಡನ ಮನೆ ಎದುರು ಧರಣಿ ಆರಂಭಿಸಿದ್ದಾರೆ. ಈಕೆ ಗಂಡ ಮುರುಳಿ ಟೈರ್​​ ಡೀಲರ್​ ಆಗಿದ್ದು, ಲೇವಾದೇವಿಯಲ್ಲಿ ಎತ್ತಿದ ಕೈ. ಅದಕ್ಕಾಗಿಯೇ ಪೊಲೀಸರಿಗೆ ಸಂಥಿಂಗ್​ ನೀಡಿ ಪ್ರಭಾವ ಬೀರಿದ್ದಾನಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred