ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯವರನ್ನು ನಿಂದಿಸಿದ ಯುವತಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ನಂತರ 16 ವರ್ಷದ ಬಾಲಕಿಯೊಬ್ಬಳು ಕ್ಷಮೆ ಕೋರಿದ್ದು, ಪ್ರತಿಭಟಿಸಿದ ಯುವತಿ ಮತ್ತು ಕ್ಷಮೆ ಕೋರಿದ ಬಾಲಕಿ ಇಬ್ಬರೂ ಬೇರೆ ಬೇರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದು ಕಾನೂನಿನಿಂದ ತಪ್ಪಿಸಿಕೊಳ್ಳಲು ಮಾಡಿದ ಪಿತೂರಿಯೇ ಎಂಬ ಚರ್ಚೆ ಶುರುವಾಗಿದೆ.
ವಿದ್ಯಾರ್ಥಿಗಳ ನೆಪದಲ್ಲಿ ದೆಹಲಿಯಲ್ಲಿ ಜಂತರ್ ಮಂತರ್‌ನಲ್ಲಿ ನಡೆದಿರುವ ಘಟನೆಯ ಹಿಂದಿನ ಪಿತೂರಿಗಳ ಬಗ್ಗೆ ಇದಾಗಲೇ ಹಲವಾರು ದಾಖಲೆಗಳು ಸಿಕ್ಕಿವೆ. ವಿದ್ಯಾರ್ಥಿಗಳ ಹಿತದೃಷ್ಟಿ ಎಂದು ನೆಪ ಮಾಡಿಕೊಂಡು, ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗಳನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪಿತೂರಿ ನಡೆಸಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಪಂಜಾಬ್ನ ಆಪ್ ಪಕ್ಷದಲ್ಲಿ ನಡೆದಿರುವ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಲೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೇರಳಲ್ಲಿಯೂ ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿದೆ. ವಿದ್ಯಾರ್ಥಿಗಳೇ ನಿಮ್ಮ ಗುರಿಯಾಗಿದ್ದರೆ, ಇವರ ವಿರುದ್ಧ ಏನು ಮಾಡುವಿರಿ ಎಂದು ಕೇಳಿದಾಗ, ಜಿರಳೆ ಅಭಿಜೀತ್ ದೀಪ್ಕೆ ತಡಬಡಾಯಿಸಿದ ವಿಡಿಯೋ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿದ್ದ ಬೆನ್ನಲ್ಲೇ ಇದರ ಹಿಂದಿನ ಪಿತೂರಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆ ವಿಷಯವನ್ನು ಬಿಟ್ಟು, ಮತ್ತೊಬ್ಬ ಕೇಂದ್ರ ಸಚಿವರ ರಾಜೀನಾಮೆ ತಮ್ಮ ಗುರಿ ಎನ್ನುವ ಉದ್ದೇಶ ಏನು ಎಂದು ಚರ್ಚೆಯಾಗುತ್ತಿರುವಾಗಲೇ 16 ವರ್ಷದ ಬಾಲಕಿಯೊಬ್ಬಳು ದಿಢೀರನೆ ಬೆಳಕಿಗೆ ಬಂದಳು.
ಪ್ರತಿಭಟನೆಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಳು ಈಕೆ. ಎಫ್‌ಐಆರ್ ದಾಖಲಾದ ಮೇಲೆ, ವಿಡಿಯೋ ಮಾಡಿ ಕ್ಷಮೆ ಕೋರಿದಳು 16ರ ಬಾಲಕಿ. ಪ್ರಧಾನಿ ನರೇಂದ್ರಮೋದಿ ಕ್ಷಮಾದಾನ ಕೊಟ್ಟು ವಿಡಿಯೋನು ಮಾಡಿದರು. ಬಳಿಕ ಈಕೆಯ ಅಮ್ಮ ಬಂದು ನಮಗೆ ಜೀವದಾನ ಮಾಡಿದ್ರಿ. ಈಕೆಯ ಬ್ರೈನ್ವಾಷ್ ಮಾಡಲಾಗಿತ್ತು. ಮಕ್ಕಳನ್ನು ತಪ್ಪು ದಾರಿಗೆ ತಳ್ಳುವವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದೆಲ್ಲಾ ಹೇಳಿದರು. ಇದು ಕೂಡ ಸಾಕಷ್ಟು ಮಾಧ್ಯಮಗಳಲ್ಲಿ ಪ್ರಸಾರ ಆಯಿತು.
ಅಮ್ಮನ ಸ್ಪಷ್ಟನೆ
ಆದರೆ,, ಇದೀಗ ಮತ್ತೊಂದು ಚರ್ಚೆ ಶುರುವಾಗಿದೆ. ಅದೇನೆಂದರೆ, ಅವರ ಅಮ್ಮನೇ ಹೇಳಿದ ಹಾಗೆ, ಪ್ರಧಾನಿಯವರ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ದೂರಿನ ಆಧಾರದ ಮೇಲೆ, ನೋಯ್ಡಾ ಪೊಲೀಸರು ಕಳೆದ ವಾರ ಆಕೆಯ ವಿರುದ್ಧ 'ಜೀರೋ ಎಫ್‌ಐಆರ್' ದಾಖಲಿಸಿದ್ದರು. ಈ ಎಫ್‌ಐಆರ್‌ನಲ್ಲಿ ಆರೋಪಿಯನ್ನು 25 ವರ್ಷದ ರುಚಿಕಾ ಸಿಂಗ್ ಎಂದು ಗುರುತಿಸಲಾಗಿತ್ತು. ಆದರೆ, ಎಫ್‌ಐಆರ್‌ನಲ್ಲಿ ನಮೂದಿಸಲಾದ ಆಕೆಯ ಹೆಸರು ಮತ್ತು ವಯಸ್ಸು ತಪ್ಪಾಗಿದೆ ಎಂದು ಆಕೆಯ ತಾಯಿ ಸ್ಪಷ್ಟಪಡಿಸಿದರು. ಆದರೆ ಇದೀಗ ಪೊಲೀಸರು ಮಾಡಿದ್ದು ತಪ್ಪು ಅಲ್ಲವೇ ಅಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಅವಳೇ ಬೇರೆ, ಇವಳೇ ಬೇರೆ?
ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದವಳು ಯುವತಿಯೇ ಹೊರತು ಬಾಲಕಿಯಲ್ಲ. ಅವಳ ವೈರಲ್ ವಿಡಿಯೋ ನೋಡಿದರೆ ತಿಳಿಯುತ್ತದೆ. ಆದರೆ ಕ್ಷಮೆ ಕೋರಿದವಳು, ಬಾಲಕಿ. ಬಾಲಕಿಯ ಮೇಲೆ ಎಫ್‌ಐಆರ್ ದಾಖಲಾದರೆ, ಆಕೆ ಸುಲಭದಲ್ಲಿ ಬಚಾವ್ ಆಗಬಹುದು ಎನ್ನುವ ಕಾರಣಕ್ಕೆ ಕ್ಷಮೆ ಕೋರಿಸಿದ್ದಾರೆಯೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ, ಪ್ರತಿಭಟನೆಯ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದವಳು ಸುಮಾರು 24-25 ವರ್ಷದ ಯುವತಿ ಎನ್ನುವುದು ಅವಳನ್ನು ನೋಡಿದರೆ ತಿಳಿಯುತ್ತದೆ. ಆದರೆ ಅವಳ ವಿರುದ್ಧ ಎಫ್‌ಐಆರ್ ದಾಖಲಾದರೆ ಪ್ರಾಪ್ತಳಾಗಿರುವ ಕಾರಣ, ಅದು ಕಷ್ಟ ಆಗಬಹುದು. ಆದ್ದರಿಂದ ಬಾಲಕಿಯನ್ನು ಮುಂದೆ ತರಲಾಗಿದೆಯೇ ಎನ್ನುವ ವಿಷಯ ಭಾರಿ ಚರ್ಚೆಯಾಗುತ್ತಿದೆ. ಹಾಗಿದ್ದರೆ ಇಲ್ಲಿ ನಿಜಕ್ಕೂ ಆಗಿರುವುದೇನು ಎನ್ನುವ ತನಿಖೆ ಆಗಬೇಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೇತನ್ ಅನೂಪ್ ಎನ್ನುವವರು ಡಿಟೇಲ್ ಸ್ಟಡಿ ಮಾಡಿದ್ದು, ತಮ್ಮ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.


