ಹೆಂಡತಿ ಫೇಸ್ಬುಕ್ ಪ್ರೀತಿ ಗಂಡನ ಪ್ರಾಣವನ್ನೇ ತೆಗೀತು!

First Published 25, Feb 2018, 10:29 AM IST
Wife Murdered Husband
Highlights

ಕುರುಬರಹಳ್ಳಿಯ ಜೆ.ಸಿ. ನಗರದಲ್ಲಿ ಫೆ. 22 ರಂದು ನಡೆದಿದ್ದ ಪಾನಿಪುರಿ ವ್ಯಾಪಾರಿ ನರಸಿಂಹಮೂರ್ತಿ ಕೊಲೆ ಪ್ರಕರಣವನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇದಿಸಿದ್ದು, ಮೃತನ ಪತ್ನಿ ಹಾಗೂ ಆಕೆಯ
ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ್ದಾರೆ.

ಬೆಂಗಳೂರು (ಫೆ.25): ಕುರುಬರಹಳ್ಳಿಯ ಜೆ.ಸಿ. ನಗರದಲ್ಲಿ ಫೆ. 22 ರಂದು ನಡೆದಿದ್ದ ಪಾನಿಪುರಿ ವ್ಯಾಪಾರಿ ನರಸಿಂಹಮೂರ್ತಿ ಕೊಲೆ ಪ್ರಕರಣವನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇದಿಸಿದ್ದು, ಮೃತನ ಪತ್ನಿ ಹಾಗೂ ಆಕೆಯ
ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ್ದಾರೆ.
ಅನಿತಾ (೨೨), ಈಕೆಯ ಪ್ರಿಯಕರ ಮೈಸೂರಿನ ರೋಷನ್, ಈತನ ಸ್ನೇಹಿತ ಚಾಮರಾಜನಗರದ ಸೋಮರಾಜು (೨೭) ಬಂಧಿತರು. ಮೂಲತಃ ರಾಮನಗರ ಜಿಲ್ಲೆಯ ನರಸಿಂಹಮೂರ್ತಿ ಏಳು ವರ್ಷಗಳ ಹಿಂದೆ ಅನಿತಾಳನ್ನು ವಿವಾಹವಾಗಿದ್ದರು. ದಂಪತಿಗೆ ಐದು ವರ್ಷದ ಪುತ್ರನಿದ್ದು, ಅಜ್ಜಿಯ   ಆಶ್ರಯದಲ್ಲಿ ಬೆಳೆಯುತ್ತಿದ್ದ. ದಂಪತಿ ಇಬ್ಬರೇ ಕುರುಬರ ಹಳ್ಳಿಯ ಜೆ.ಸಿ.ನಗರದಲ್ಲಿ ವಾಸವಿದ್ದರು. ನರಸಿಂಹಮೂರ್ತಿ ತಳ್ಳುಗಾಡಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿ
ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಅನಿತಾಗೆ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಮೂಲಕ ಮೈಸೂರಿನ ರೋಷನ್ ಎಂಬಾತನ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು
ನಿತ್ಯ ಸಂಭಾಷಣೆ ನಡೆಸುತ್ತಿದ್ದರು. ಸ್ನೇಹ ಕ್ರಮೇಣ ಅನೈತಿಕ ಸಂಬಂಧಕ್ಕೆ ತಿರುಗಿತ್ತು.  ಪತ್ನಿ ಮತ್ತೊಬ್ಬರ ಜತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವಿಚಾರ ಪತಿ ನರಸಿಂಹಮೂರ್ತಿಗೆ ತಿಳಿದು ಎಚ್ಚರಿಕೆ ನೀಡಿದ್ದರು. ಇದೇ ವಿಚಾರಕ್ಕೆ ನಿತ್ಯ ಮನೆಗೆ
ಕುಡಿದು ಬರುತ್ತಿದ್ದ ನರಸಿಂಹಮೂರ್ತಿ, ಅನೈತಿಕ ಸಂಬಂಧ ವಿಷಯ ಪ್ರಸ್ತಾಪಿಸಿ ಜಗಳವಾಡುತ್ತಿದ್ದ. ಇಷ್ಟಾದರೂ ಅನೈತಿಕ ಸಂಬಂಧ ಮುಂದುವರಿಸಿದ್ದ ಅನಿತಾ ಪತಿಯ ಕಿರುಕುಳದ ಬಗ್ಗೆ ರೋಷನ್ ಬಳಿ ಹೇಳಿಕೊಂಡಿದ್ದಳು. ಬಳಿಕ ಆರೋಪಿಗಳು ನರಸಿಂಹಮೂರ್ತಿ ಅನಿತಾ ರೋಷನ್ ಸೋಮರಾಜು ಪತಿಯನ್ನು ಕೊಂದು ವಿವಾಹವಾಗಲು ನಿರ್ಧರಿಸಿದ್ದರು.

ಗುರುವಾರ ರಾತ್ರಿ ನರಸಿಂಹಮೂರ್ತಿ ಕುಡಿದು ಬಂದು ಮನೆಯಲ್ಲಿ ಮಲಗಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಆರೋಪಿಗಳು ಯಾರಿಗೂ ತಿಳಿಯದಂತೆ ನರಸಿಂಹಮೂರ್ತಿ ಮನೆಗೆ ಬಂದಿದ್ದರು. ಅನಿತಾಳೇ ಬಾಗಿಲು ತೆರೆದಿದ್ದಳು. ಬಳಿಕ
ಕೊಠಡಿಯಲ್ಲಿ ಅವರ ಕೊಲೆಯಾಗಿದ್ದು, ಈ ಹತ್ಯೆಯಲ್ಲಿ ರೋಷನ್ ಮತ್ತು ಸೋಮರಾಜು ಸಹ ಭಾಗಿಯಾಗಿದ್ದು, ಅವರು ನರಸಿಂಹಮೂರ್ತಿ ಅವರಿಗೆ ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್
ರಾಥೋಡ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

 

loader