ಕೇಬಲ್ ಆಪರೇಟರ್ ಹಾಗೂ ಕಿರಾಣಿ ಅಂಗಡಿ ಮಾಲೀಕನಾಗಿದ್ದ ಸಂಜೀವ್ ಹರೀಶ್ ಬಾಬು ಪತ್ನಿಯನ್ನು ಫೇಸ್'ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಪದೇಪದೇ ಮೊಬೈಲಿನಲ್ಲಿ ಮಾತನಾಡುತ್ತಿದ್ದ.
ಶಿಕಾರಿಪುರ(ಮೇ.26): ಫೇಸ್'ಬುಕ್'ನಲ್ಲಿ ಆದ ಪರಿಚಯ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿಕಾರಿಪುರದ ಬಳ್ಳೂರು ಗ್ರಾಮದಲ್ಲಿ ನಡೆದಿದೆ.
ಸಂಜೀವ್ ಕುಮಾರ್[28] ಕೊಲೆಯಾದವ. ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ ಕಾರಣ ಎಂಬಾತನನ್ನು ಹರೀಶ್ ಬಾಬು [35] ಕೊಲೆ ಮಾಡಿದ್ದಾನೆ. ಕೇಬಲ್ ಆಪರೇಟರ್ ಹಾಗೂ ಕಿರಾಣಿ ಅಂಗಡಿ ಮಾಲೀಕನಾಗಿದ್ದ ಸಂಜೀವ್ ಹರೀಶ್ ಬಾಬು ಪತ್ನಿಯನ್ನು ಫೇಸ್'ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಪದೇಪದೇ ಮೊಬೈಲಿನಲ್ಲಿ ಮಾತನಾಡುತ್ತಿದ್ದ.
ಇದರಿಂದ ಬೇಸತ್ತ ಹರೀಶ್ ತನ್ನ ಇಬ್ಬರು ಸ್ನೇಹಿತರಾದ ನರಸಿಂಹ ಮೂರ್ತಿ ಹಾಗೂ ಸುರೇಶ್ ಎಂಬುವವರ ಜೊತೆ ಮೇ.6 ರಂದು ತನ್ನ ಕ್ವಾರಿ ಕರೆಸಿಕೊಂಡು ಅಲ್ಲಿಯೇ ಮಣ್ಣು ಮಾಡಿದ್ದಾರೆ. ಮೇ. 14 ರಂದು ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಸಂಜೀವ್ ಅವರ ತಂದೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಪ್ರಕರಣ ಬಹಿರಂಗವಾಗಿದೆ. ಮೂವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದಾರೆ.
