ಈ ಸಂಬಂಧ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮಕ್ಕಳಿ ಲ್ಲದ ಹಿನ್ನೆಲೆಯಲ್ಲಿ ಮಹಿಳೆ ಮುಜುಗರ ಅನುಭವಿಸು ತ್ತಿದ್ದಳು. ಒಂದು ದಿನ ಇದೇ ವಿಷಯಕ್ಕೆ ಜಗಳವಾಗಿದೆ. ಅದು ಇತ್ಯರ್ಥವಾಗಿಲ್ಲ.
ಲಖನೌ(ಮಾ.12): ವಿವಾಹವಾದ 10 ವರ್ಷಗಳಿಂದ ಮಹಿಳೆಯೊಬ್ಬಳು ಲೈಂಗಿಕ ಸಂಬಂಧ ಹೊಂದದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ನಡೆದಿದೆ. ಬುಲಂದ್‌ಶಹರ್ ಮೂಲದ ಈ ದಂಪತಿ ಕಳೆದ 8 ವರ್ಷಗಳಿಂದ ಗಾಜಿಯಾಬಾದ್‌ನಲ್ಲಿ ವಾಸಿಸುತಿತ್ತು. ಆದರೆ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಪತಿ ನಿರಾಕರಿಸುತ್ತಿದ್ದನೆನ್ನಲಾಗಿದೆ.
ಈ ಸಂಬಂಧ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮಕ್ಕಳಿ ಲ್ಲದ ಹಿನ್ನೆಲೆಯಲ್ಲಿ ಮಹಿಳೆ ಮುಜುಗರ ಅನುಭವಿಸು ತ್ತಿದ್ದಳು. ಒಂದು ದಿನ ಇದೇ ವಿಷಯಕ್ಕೆ ಜಗಳವಾಗಿದೆ. ಅದು ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾರನೇ ದಿನ ಬೆಳಗ್ಗೆ ಪತಿಯು ಸ್ನಾನ ಮಾಡಿ ಹೊರಬರುತ್ತಿದ್ದಂತೆ, ಪತ್ನಿಯು ಚೂರಿಯಿಂದ ದಾಳಿ ನಡೆಸಿ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಈ ಸಂಬಂಧ ದೂರು ದಾಖಲಾಗಿ, ಮಹಿಳೆಯ ಬಂಧನವಾಗಿದೆ.
