ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಹಾರ್ಡ್ವೇರ್ ಅಂಗಡಿ ಇಟ್ಟುಕೊಂಡಿದ್ದ ಚಪಲ ಚನ್ನಿಗರಾಯನೊಬ್ಬ ತನ್ನ ಸ್ನೇಹಿತನ ಪತ್ನಿಯೊಂದಿಗೆ ಲವ್ವಿ ಡವ್ವಿ ಇಟ್ಟುಕೊಂಡಿದ್ದಲ್ಲದೇ ಆಕೆಯೊಂದಿಗೆ ಪರಾರಿಯಾಗಿರುವ ಸಿನಿಮೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ(ಆ.23): ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಹಾರ್ಡ್ವೇರ್ ಅಂಗಡಿ ಇಟ್ಟುಕೊಂಡಿದ್ದ ಚಪಲ ಚನ್ನಿಗರಾಯನೊಬ್ಬ ತನ್ನ ಸ್ನೇಹಿತನ ಪತ್ನಿಯೊಂದಿಗೆ ಲವ್ವಿ ಡವ್ವಿ ಇಟ್ಟುಕೊಂಡಿದ್ದಲ್ಲದೇ ಆಕೆಯೊಂದಿಗೆ ಪರಾರಿಯಾಗಿರುವ ಸಿನಿಮೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸತೀಶ್ ಎಂಬಾತನೇ ಎಸ್ಕೇಪ್ ಆಗಿರುವ ಆಸಾಮಿ. ಸತೀಶ್ ಮತ್ತು ಮಂಜುನಾಥ್ ಕುಟುಂಬಗಳು ಒಂದೇ ಬಡಾವಣೆಯ ಅಕ್ಕ ಪಕ್ಕದಲ್ಲಿ ವಾಸವಾಗಿದ್ದವು. ಈ ವೇಳೆ ಮಂಜುನಾಥ್ ಪತ್ನಿ ಮಂಜುಳಾ ಮೇಲೆ ಕಣ್ಣು ಹಾಕಿದ ಸತೀಶ್, ಆಕೆಯೊಂದಿಗೆ ಅಕ್ರಮ ಸಂಬಂಧವನ್ನೂ ಇಟ್ಟುಕೊಂಡಿದ್ದ. ಇಬ್ಬರು ಚಕ್ಕಂದ ಆಡೋ ವಿಷಯ ಉಳಿದವರಿಗೆ ತಿಳಿದು,ಬುದ್ಧಿವಾದ ಸಹ ಹೇಳಿದ್ದರು. ಆದರೂ ತಮ್ಮ ತಪ್ಪು ತಿದ್ದುಕೊಳ್ಳದ ಇಬ್ಬರೂ ಕಳೆದ ಮೇನಲ್ಲಿ ಪರಾರಿಯಾಗಿ ಮೈಸೂರಿನಲ್ಲಿ ವಾಸವಾಗಿದ್ದಾರೆ.
ಪ್ರೇಯಸಿ ಹಾಗೂ ಇಬ್ಬರು ಮಕ್ಕಳನ್ನು ಮೈಸೂರಿನ ಲೋಕನಾಯಕ ಬಡಾವಣೆಯ ಮನೆಯೊಂದರಲ್ಲಿ ಇರಿಸಿ, ತಾನು ನಿತ್ಯ ಗಂಡಸಿ ಹ್ಯಾಂಡ್ ಪೋಸ್ಟ್ ಗೆ ವ್ಯಾಪಾರಕ್ಕೆ ಬರುತ್ತಿದ್ದ. ತನಗೆ ಮೋಸ ಮಾಡಿ, ಕದ್ದು ಮುಚ್ಚಿ ಬಂದು ಹೋಗುವ ಗಂಡ, ಹಾರ್ಡ್ ವೇರ್ ಅಂಗಡಿಯಲ್ಲಿರುವ ಸುದ್ದಿ ತಿಳಿದ ಪತ್ನಿ ರುಕ್ಮಿಣಿ, ಅಂಗಡಿಗೆ ನುಗ್ಗಿ, ಪತಿಗೆ ಮಂಗಳಾರತಿ ಮಾಡಿದಳು.
