ಇತ್ತ ತನ್ನ ಸ್ವಂತ ಪತ್ನಿಯನ್ನು ಗುರುತಿಸದಾದ ಪತಿ ಮಹಾಶಯ ಮೇಕಪ್ ಇದ್ದಾಗಿನ ಆಕೆಯ ಮುಖ ಸೌಂದರ್ಯ ಮೇಕಪ್ ಇಲ್ಲದಿದ್ದಾಗ ಕಂಡು ಹೌಹಾರಿ ದ್ದ
ದುಬೈ (ಅ.20): ಮೊದಲ ಬಾರಿಗೆ ಮೇಕಪ್ ಇಲ್ಲದ ಪತ್ನಿಯ ಮುಖ ಕಂಡು ಗುರುತಿಸದಾದ ಪತಿ ಮಹಾಶಯ ಆಕೆಗೆ ಡೈವೋರ್ಸ್ ನೀಡಿರುವ ವಿಚಿತ್ರ ಘಟನೆ ದುಬೈನಲ್ಲಿ ನಡೆದಿದೆ. ಯುಎಇಯ ಶಾರ್ಜಾದಲ್ಲಿರುವ ಅಲ್ ಮುಮ್ಮಜಾರ್ ಬೀಚ್ ಗೆ ನವ ದಂಪತಿ ತೆರಳಿದ್ದರು. ಸಮುದ್ರದಲ್ಲಿ ಮೈಮರೆತು ಸ್ನಾನ ಮಾಡಿದ್ದ ಪತ್ನಿಯ ಮೇಕಪ್ ಸಂಪೂರ್ಣವಾಗಿ ತೊಳೆದುಹೋಗಿತ್ತು. ಇತ್ತ ತನ್ನ ಸ್ವಂತ ಪತ್ನಿಯನ್ನು ಗುರುತಿಸದಾದ ಪತಿ ಮಹಾಶಯ ಮೇಕಪ್ ಇದ್ದಾಗಿನ ಆಕೆಯ ಮುಖ ಸೌಂದರ್ಯ ಮೇಕಪ್ ಇಲ್ಲದಿದ್ದಾಗ ಕಂಡು ಹೌಹಾರಿದ್ದು ಆಕೆಗೆ ವಿಚ್ಛೇದನ ನೀಡಿದ್ದಾನೆ. ಕಾಸ್ಮೆಟಿಕ್ ಹಾಗೂ ನಕಲಿ ಐ ಲ್ಯಾಶಗಳನ್ನು ಬಳಿಸಿಕೊಂಡು ಸುಂದರಿಯಾಗಿ ಕಾಣಿಸಿಕೊಳ್ಳುವ ಮೂಲಕ ತನಗೆ ಆಕೆ ವೈವಾಹಿಕ ಮೋಸ ಮಾಡಿದ್ದಾಳೆ ಎಂದು ದೂರಿರುವ ಪತಿ ಮಹಾಶಯ ಆಕೆಗೆ ವಿಚ್ಛೇದನ ನೀಡಿದ್ದಾನೆ
