ಮಂಡ್ಯ: ಸಂಸದ ಪುಟ್ಟರಾಜು ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ. ಅವರು ರಾಜೀನಾಮೆ ಕೊಟ್ಟರೆ ಮೋದಿಯನ್ನು ಅಧಿಕಾರದಿಂದ ಇಳಿಸೋಕೆ ಆಗುತ್ತಾ? ಶಾಸಕರು ರಾಜೀನಾಮೆ ಕೊಟ್ಟರೆ ಸಿಎಂರವರನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾವೇರಿ ಪ್ರಾಂತ್ಯದ ಶಾಸಕರು ಮನಸಾರೆ ಒಪ್ಪಿ ರಾಜೀನಾಮೆ ಕೊಡಬೇಕು. ನಾನು ಹೇಳಿದರೆ ರಾಜೀನಾಮೆ ಕೊಡ್ತಾರಾ? ಪುಟ್ಟರಾಜು ನನ್ನ ಕೇಳಿ ರಾಜೀನಾಮೆ ನೀಡಿಲ್ಲ. ನಮ್ಮ ಸಮಸ್ಯೆ ಪರಿಹಾರವಾಗೋವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಜಿ. ಮಾದೇಗೌಡ ಹೇಳಿದ್ದಾರೆ.

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಪುಟ್ಟರಾಜುಗೆ ಮಾದೇಗೌಡ ಥ್ಯಾಂಕ್ಸ್ ಹೇಳಿದ್ದಾರೆ. ಕಾವೇರಿ ಹೋರಾಟ ಬೆಂಬಲಿಸಿ ರಾಜೀನಾಮೆ ನೀಡಿದ್ದಕ್ಕೆ ಥ್ಯಾಂಕ್ಸ್, ನೀನ್ಯಾಕೆ ರಾಜೀನಾಮೆ ಕೊಟ್ಟೆ, ಮೊದಲು ಶಾಸಕರ ರಾಜೀನಾಮೆ ಕೊಡಿಸಬೇಕಿತ್ತು ಎಂದು ಭೇಟಿ ವೇಳೆ ಕೇಳಿದ್ದಾರೆ.