ವ್ಯಭಿಚಾರ ಪ್ರಕರಣಗಳಲ್ಲಿ  ಮಹಿಳೆಯರು ಒಪ್ಪಿಗೆ ಮೂಲಕ ಲೈಂಗಿಕ ಸಂಪರ್ಕ ಹೊಂದಿದಾಗ ಪುರುಷರಿಗೆ ಮಾತ್ರ ಏಕೆ ಶಿಕ್ಷೆ ವಿಧಿಸಲಾಗುತ್ತದೆ. ಇದು ಲಿಂಗ ತಾರತಮ್ಯಕ್ಕೆ ಕಾರಣವಾಗುತ್ತದೆ’.

ನವದೆಹಲಿ(ಡಿ.09): ವ್ಯಭಿಚಾರ ಪ್ರಕರಣಗಳಲ್ಲಿ ಪುರುಷರನ್ನೇ ಮಾತ್ರ ಏಕೆ ಶಿಕ್ಷಿಸುತ್ತೀರಿ ಮಹಿಳೆಯರಿಗೆ ಏಕೆ ಶಿಕ್ಷೆ ನೀಡಲ್ಲ ಎಂಬ ಪ್ರಶ್ನೆಗಳು ಸುಪ್ರೀಂಕೋರ್ಟ್‌ನಲ್ಲಿ ವ್ಯಕ್ತವಾಗಿವೆ.

ವ್ಯಭಿಚಾರಕ್ಕೆ ಸಂಬಂಧಿಸಿದ ಭಾರತದ ಕಾನೂನುಗಳಲ್ಲಿ ಲಿಂಗ ತಾರತಮ್ಯ ಉಂಟಾಗುತ್ತಿದ್ದು ಎಂದು ಇಟಲಿಯ ಟ್ರೆಂಟೋ'ದಲ್ಲಿ ಉದ್ಯೋಗಿಯಾಗಿರುವ ಕೇರಳದ ಜೋಸೆಫ್‌ ಶೈನ್‌ ಎಂಬುವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದ ಮಂಡಿಸಿದ್ದಾರೆ.

‘ವ್ಯಭಿಚಾರ ಪ್ರಕರಣಗಳಲ್ಲಿ ಮಹಿಳೆಯರು ಒಪ್ಪಿಗೆ ಮೂಲಕ ಲೈಂಗಿಕ ಸಂಪರ್ಕ ಹೊಂದಿದಾಗ ಪುರುಷರಿಗೆ ಮಾತ್ರ ಏಕೆ ಶಿಕ್ಷೆ ವಿಧಿಸಲಾಗುತ್ತದೆ. ಇದು ಲಿಂಗ ತಾರತಮ್ಯಕ್ಕೆ ಕಾರಣವಾಗುತ್ತದೆ’.ಅಲ್ಲದೆ ‘ಭಾರತೀಯ ದಂಡ ಸಂಹಿತೆಯ (ಐಪಿಸಿ) 497ನೇ ಸೆಕ್ಷನ್‌ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 198 (2) ಸೆಕ್ಷನ್‌ಗಳು ರೂಢಿಗತ ನಿಯಮಗಳಾಗಿದ್ದು ಲಿಂಗ ತಾರತಮ್ಯ ಉಂಟುಮಾಡುವಂತಿವೆ' ಈ ಕಾರಣದಿಂದ ಈ ಸೆಕ್ಷನ್‌ಗಳನ್ನು ಅಸಂವಿಧಾನಿಕ ಎಂದು ಘೋಷಿಸಬೇಕು’ ಎಂದು ಜೋಸೆಫ್‌ ಸುಪ್ರಿಂ'ಗೆ ಮನವಿ ಮಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಪ್ರಕರಣದ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.