ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಯಾಕಿಲ್ಲ ಗೊತ್ತಾ..?

First Published 7, Jun 2018, 2:26 PM IST
Why President Ramnath Kovind will not host Iftar at Rashtrapati Bhavan
Highlights

ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಯಾಕಿಲ್ಲ?

ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿರ್ಧಾರಕ್ಕೆ ಕಾರಣವೇನು?

ಇಫ್ತಾರ್ ಅಷ್ಟೇ ಅಲ್ಲ, ದೀಪಾವಳಿ, ಕ್ರಿಸಮಸ್ ಕೂಡ ಆಚರಿಸಲ್ಲ

ತೆರಿಗೆದಾರರ ಹಣದಲ್ಲಿ ಧಾರ್ಮಿಕ ಆಚರಣೆ ಬೇಡ ಎಂದ ರಾಷ್ಟ್ರಪತಿ

ನವದೆಹಲಿ[ಜೂ.7]: ದಶಕಗಳ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಆಚರಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿರಾಕರಿಸಿದ್ದು, ಇಫ್ತಾರ್ ಕೂಟ ನಿರಾಕರಿಸಿರುವುದಕ್ಕೆ ನಿಜವಾದ ಕಾರಣವೇನು ಎಂಬುದು ಇದೀಗ ಬಹಿರಂಗಗೊಂಡಿದೆ. 

ರಾಷ್ಟ್ರಪತಿ ಕೋವಿಂದ್ ಇಫ್ತಾರ್ ಕೂಟ ನಿರಾಕರಿಸಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್, ಕೆಳೆದ ಜುಲೈನಲ್ಲಿ ಕೋವಿಂದ್ ಅಧಿಕಾರಕ್ಕೆ ಬಂದ ಕೂಡಲೇ ರಾಷ್ಟ್ರಪತಿ ಭವನದಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳನ್ನು ಆಚರಿಸದಿರಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.

ಜುಲೈ ತಿಂಗಳಿನಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ದೀಪಾವಳಿ, ಕ್ರಿಸ್'ಮಸ್, ಹೋಳಿ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಿಲ್ಲ. ಅದೇ ರೀತಿ ಇಫ್ತಾರ್ ಕೂಟವನ್ನೂ ಆಚರಿಸದಂತೆ ನಿರ್ಧರಿಸಲಾಗಿದೆ. ತೆರಿಗೆದಾರರ ಹಣದಲ್ಲಿ ರಾಷ್ಟ್ರಪತಿ ಭವನದಲ್ಲಿ ಯಾವುದೇ ಧಾರ್ಮಿಕ ಆಚರಣೆ ನಡೆಸುವುದು ಸರಿಯಲ್ಲ ಎಂಬುದು ಕೋವಿಂದ್ ಅಭಿಪ್ರಾಯವಾಗಿದೆ ಎಂದು ಅಶೋಕ್ ಮಲಿಕ್ ತಿಳಿಸಿದ್ದಾರೆ.

loader