ಮಿತ್ತಲ್ ತನ್ನ ಸಂಸ್ಥೆಯ ಮೂಲಕ 6.50 ಲಕ್ಷ ಹೂಡಿಕೆದಾರರಿಂದ 3700 ಕೋಟಿ ರೂಪಾಯಿಗಳನ್ನು ಪಡೆದು ವಂಚಿಸಿದ್ದ ಎಂದು ಆರೋಪಿಸಲಾಗಿದೆ.

ನೋಯ್ಡಾ(ಫೆ.07): ನೋಯ್ಡಾದಲ್ಲಿ ನಡೆದ 3,700 ಕೋಟಿ ರೂಪಾಯಿ ಮೊತ್ತದ ಆನ್‌'ಲೈನ್ ವಂಚನೆ ಪ್ರಕರಣ ಸಂಬಂಧ, ನಟಿ ಸನ್ನಿ ಲಿಯೋನ್ ಮತ್ತು ಅಮಿಶಾ ಪಟೇಲ್ ಅವರನ್ನು ನೋಯ್ಡಾ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಹಗರಣದ ಕಿಂಗ್‌ಪಿನ್ ಅನುಭವ್ ಮಿತ್ತಲ್ 2016ರ ನ.29ರಂದು ಗ್ರೇಟರ್ ನೊಯ್ಡಾದ ಕ್ರೌನ್ ಪ್ಲಾಜಾ ಹೋಟೆಲ್‌'ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಟ್‌'ಮಾರ್ಟ್ ವೆಬ್‌'ಸೈಟ್‌'ನ್ನು ಸನ್ನಿಲಿಯೋನ್ ಉದ್ಘಾಟಿಸಿದ್ದರು.

ಈ ವೇಳೆ ಅಮಿಶಾ ಪಟೇಲ್ ಕೂಡ ಭಾಗಿಯಾಗಿದ್ದರು. ನಕಲಿ ಸ್ಕೀಮ್‌'ಗೆ ಹೂಡಿಕೆದಾರರನ್ನು ಸೆಳೆಯಲು ಈ ಇಬ್ಬರು ನಟಿಯರನ್ನು ಮಿತ್ತಲ್ ಬಳಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ಮಾಡಲಾಗುವುದು. ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಎಸ್‌ಟಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿತ್ತಲ್ ತನ್ನ ಸಂಸ್ಥೆಯ ಮೂಲಕ 6.50 ಲಕ್ಷ ಹೂಡಿಕೆದಾರರಿಂದ 3700 ಕೋಟಿ ರೂಪಾಯಿಗಳನ್ನು ಪಡೆದು ವಂಚಿಸಿದ್ದ ಎಂದು ಆರೋಪಿಸಲಾಗಿದೆ.