ಮೋದಿ ಸಂಪುಟ ಪ್ರಮಾಣವಚನ ತೆಗೆದುಕೊಳ್ಳಲು 6 ಗಂಟೆ ಬಾಕಿಯಿದ್ದಾಗಲೂ ರಾಜನಾಥ್ ಸಿಂಗ್, ಗಡ್ಕರಿ ಅವರಂತಹ ಹಿರಿಯರಿಗೆ ಯಾರು ಮಂತ್ರಿ ಆಗುತ್ತಾರೆ, ತಮಗೇನು ಸಿಗುತ್ತದೆ ಎಂಬುದು ಗೊತ್ತಿರಲಿಲ್ಲ.

ಮುಂದಿನ ಮುಖ್ಯಮಂತ್ರಿ ಶೋಭಾ; ಬಿಎಸ್‌ವೈ ಫುಲ್ ಖುಷ್!

ಸಂಘಕ್ಕೂ ಬಹಳ ಮಾಹಿತಿಯೇನೂ ಇರಲಿಲ್ಲ. ಔಪಚಾರಿಕತೆ ಎಂಬಂತೆ ಪಾರ್ಲಿಮೆಂಟರಿ ಬೋಡ್ನರ್ಲ್ಲಿರುವ ಸುಷ್ಮಾ, ಜೇಟ್ಲಿ, ರಾಜನಾಥ್, ಗಡ್ಕರಿ, ರಾಮಲಾಲ್ ಜೊತೆಗೆ ಮತ್ತು ಸಂಘದ ಕೃಷ್ಣಗೋಪಾಲ್ ಜೊತೆಗೆ ಅಮಿತ್ ಶಾ ಹಿಂದಿನ ದಿನ ಮಾತನಾಡಿ ಅಭಿಪ್ರಾಯ ಕೇಳಿ, ‘ಮೋದಿಜೀ ಕೋ ಬೋಲ್ತಾ ಹೂಂ ದೇಖೇಂಗೆ’ ಎಂದು ಹೊರಟುಬಿಟ್ಟರು.

ಮೈತ್ರಿ ಸರ್ಕಾರ ಉರುಳಿಸಲು ಅಮಿತ್ ಶಾ ಲೆಕ್ಕಾಚಾರ ಬೇರೆನೇ ಇದೆ!

ಮೋದಿ ಮತ್ತು ಶಾ ಇಬ್ಬರೇ ಕುಳಿತು ಎರಡು ದಿನ, ಸುಮಾರು 10 ಗಂಟೆ ಸಂಸದರ ಹೆಸರು ಜಾಲಾಡಿ ಒಂದು ದಿನ ಮೊದಲೇ ಪಟ್ಟಿ ರೆಡಿ ಮಾಡಿದ್ದರು. ಎಲ್ಲಿಯವರೆಗೆ ಅಂದರೆ ಉತ್ತರ ಪ್ರದೇಶದ ಯೋಗಿ ಆಗಲಿ, ಮಹಾರಾಷ್ಟ್ರದ ದೇವೇಂದ್ರ ಆಗಲಿ ಯಾರನ್ನೂ ಏನೂ ಕೇಳಿಲ್ಲ ಹೇಳಿಲ್ಲ. ದಿಲ್ಲಿ ರಾಜಕೀಯಕ್ಕೆ ಇದೊಂದು ಹೊಸ ಪದ್ಧತಿ ಬಿಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ