ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮದುವೆಯನ್ನು ಆಗದೇ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿರುವುದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ವ್ಯಂಗ್ಯವಾಡಿದ್ದಾರೆ. ಕರಣ್ ಜೋಹರ್ ಮದುವೆಯಾಗುವುದಕ್ಕೆ ಹುಡುಗಿ ಸಿಗಲಿಲ್ಲ ಹಾಗಾಗಿ ಬಾಡಿಗೆ ತಾಯಿಯನ್ನು ಅವಲಂಬಿಸಿದ್ದಾರೆ ಎಂದಿದ್ದಾರೆ.

ನವದೆಹಲಿ (ಮಾ.06): ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮದುವೆಯನ್ನು ಆಗದೇ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿರುವುದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ವ್ಯಂಗ್ಯವಾಡಿದ್ದಾರೆ. ಕರಣ್ ಜೋಹರ್ ಮದುವೆಯಾಗುವುದಕ್ಕೆ ಹುಡುಗಿ ಸಿಗಲಿಲ್ಲ ಹಾಗಾಗಿ ಬಾಡಿಗೆ ತಾಯಿಯನ್ನು ಅವಲಂಬಿಸಿದ್ದಾರೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆಯಾಗಲು ಹುಡುಗಿ ಸಿಗಲಿಲ್ವಾ? ಇಲ್ಲ ಅಂತಾದರೆ ದೇಶದಲ್ಲಿ ಸಾಕಷ್ಟು ಬಡವರಿದ್ದಾರೆ. ಅವರಲ್ಲಿ ಅವಳಿ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದಿತ್ತು. ಅವರು ಬಡವರನ್ನು ಅಣಕಿಸುವಂತೆ ಭಾಸವಾಗುತ್ತಿದೆ ಎಂದು ಅಜ್ಮಿ ಹೇಳಿದ್ದಾರೆ.

ಈ ಹುಡುಗನಿಗೆ ಈ ಹುಡುಗಿ ಎಂದು ದೇವರೇ ಜೋಡಿ ಮಾಡಿರುತ್ತಾನೆ. ಆದರೆ ಕರಣ್ ಗೆ ಯಾರನ್ನೂ ಮಾಡಿಲ್ಲ. ಅವರಿಗೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಹೇಳಲಿ. ಬಹುಶಃ ಅದಕ್ಕಾಗಿಯೇ ಮದುವೆಯಾಗಿಲ್ಲದಿರಬಹುದು. ಏನಿದು ಬಾಡಿಗೆ ತಾಯ್ತನದ ನಾಟಕ? ಎಂದು ಅಜ್ಮಿ ಪ್ರಶ್ನಿಸಿದ್ದಾರೆ.