Asianet Suvarna News Asianet Suvarna News

ಕೇರಳದಲ್ಲಿ ಕಾಣಿಸಿಕೊಂಡ ಇಸ್ರೇಲಿ ಪೊಲೀಸರು: ಹೊರ ಬಿತ್ತು ‘ಗುಪ್ತ’ಕಾರ್ಯಸೂಚಿ!

ಕೇರಳದ ಕಣ್ಣೂರಿನಲ್ಲಿ ಕಾಣಿಸಿಕೊಂಡ ಇಸ್ರೇಲಿ ಪೊಲೀಸರು! ಕಣ್ಣೂರಿಗೆ ಬಾರಿ ಬಾರಿ ಭೇಟಿ ನೀಡುತ್ತಿರುವುದು ಯಾಕೆ?! ಕಣ್ಣೂರಲ್ಲಿ ತಯಾರಾಗುತ್ತೆ ಇಸ್ರೇಲಿ ಪೊಲೀಸರ ಸಮವಸ್ತ್ರ! ಪುರುಷ ಮತ್ತು ಮಹಿಳಾ ಪೊಲೀಸರ ಸಮವಸ್ತ್ರ ತಯಾರಿಸೋ ಸಂಸ್ಥೆ! ಕಣ್ಣೂರಿನ ಮಾರ್ಯನ್ ಅರ್ಪೆಲ್ ಸಂಸ್ಥೆಯಲ್ಲಿ ಇಸ್ರೇಲಿ ಪೊಲೀಸರ ಸಮವಸ್ತ್ರ

Why Israeli Police Officers Are Frequent Visitors To A Kerala Town
Author
Bengaluru, First Published Sep 26, 2018, 10:04 AM IST

ತಿರುವನಂತಪುರಂ(ಸೆ.26): ಭೀಕರ ಜಲಪ್ರಳಯದಿಂದ ನಲುಗಿದ್ದ ಕೇರಳ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೇರಳದ ಕಣ್ಣೂರಿಗೆ ಇಸ್ರೇಲಿ ಪೊಲೀಸರು ಹಲವು ಬಾರಿ ಭೇಟಿ ನೀಡುತ್ತಿರುವವುದು ಕುತೂಹಲಕ್ಕೆ ಕಾರಣವಾಗಿದೆ.

ಅರೆ! ಇಸ್ರೇಲಿ ಪೊಲೀಸರೇಕೆ ಕೇರಳದ ಕಣ್ಣೂರಿಗೆ ಬಾರಿ ಬಾರಿ ಭೇಟಿ ನೀಡುತ್ತಿದ್ದಾರೆ ಅಂತಾ ಆಶ್ಚರ್ಯವೇ?. ಇಸ್ರೇಲಿ ಪೊಲೀಸರು ಕೇರಳಕ್ಕೆ ಬರುತ್ತಿರುವುದು ಯಾವುದೋ ಕುಖ್ಯಾತ ರೌಡಿಯನ್ನೋ, ಅಂತರಾಷ್ಟ್ರೀಯ ಕಳ್ಳನನ್ನು ಹಿಡಿಯಲು ಅಥವಾ ಗೂಢಚಾರಿಕೆ ಮಾಡಲು ಅಲ್ಲ. ಬದಲಿಗೆ ಇಸ್ರೇಲಿ ಪೊಲೀಸರು ಕೇರಳಕ್ಕೆ ಬರುತ್ತಿರುವುದು ತಮ್ಮ ಯುನಿಫಾರ್ಮ್ ಗಾಗಿ.

ಹೌದು, ಇಸ್ರೇಲಿ ಪೊಲೀಸರ ಸಮವಸ್ತ್ರ ತಯಾರಾಗೋದು ಕೇರಳದ ಕಣ್ಣೂರಿನಲ್ಲಿ.  ಇಸ್ರೇಲ್ ನ ಪುರುಷ ಮತ್ತು ಮಹಿಳಾ ಪೊಲೀಸರ ಸಮವಸ್ತ್ರವನ್ನು ಕಣ್ಣೂರಿನ ಮಾರ್ಯನ್ ಅರ್ಪೆಲ್ ನಲ್ಲಿ. 2006 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ಇಸ್ರೇಲಿ ಪೊಲೀಸರಿಗಾಗಿ ಸಮವಸ್ತ್ರ ತಯಾರಿಸುತ್ತದೆ.

"

ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಮ್ಯಾನೇಜರ್ ಸಿಜಿನ್ ಕುಮಾರ್, ಸದ್ಯ ಇಸ್ರೇಲ್ ಪೊಲೀಸರಿಗಾಗಿ ಸಮವಸ್ತ್ರ ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಫಿಲಿಪೈನ್ಸ್ ಸೇನೆಗೂ ಸಮವಸ್ತ್ರ ತಯಾರಿಸಲಿದೆ ಎಂದು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಇಸ್ರೇಲಿ ಪೊಲೀಸರು ಕೇರಳದ ಕಣ್ಣೂರಿನ ಈ ಘಟಕಕ್ಕೆ ಭೇಟಿ ನೀಡುತ್ತಿದ್ದು, ತಯಾರಾದ ಸಮವಸ್ತ್ರ ಕೊಂಡೊಯ್ಯುತ್ತಾರೆ.

Follow Us:
Download App:
  • android
  • ios