ರಾಹುಲ್ ಗಾಂಧಿಗೆ ಪ್ರಬುದ್ಧತೆ ಕೊರತೆಯಿದೆ ಎಂದಿರುವ ಶೀಲಾ ದೀಕ್ಷಿತ್ ಹೇಳಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇನ್ನಷ್ಟು ಪುಷ್ಠಿ ನೀಡಿದ್ದಾರೆ. ರಾಹುಲ್ ಗೆ ‘ಪ್ರಬುದ್ಧತೆ’ ಇಲ್ಲವೆಂದು ಇಡೀ ದೇಶಕ್ಕೆ ತಿಳಿದಿದೆ ಎಂದು ಹೇಳಿದ್ದಾರೆ.
ಅಜಂಘರ್ (ಫೆ.24): ರಾಹುಲ್ ಗಾಂಧಿಗೆ ಪ್ರಬುದ್ಧತೆ ಕೊರತೆಯಿದೆ ಎಂದಿರುವ ಶೀಲಾ ದೀಕ್ಷಿತ್ ಹೇಳಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇನ್ನಷ್ಟು ಪುಷ್ಠಿ ನೀಡಿದ್ದಾರೆ. ರಾಹುಲ್ ಗೆ ‘ಪ್ರಬುದ್ಧತೆ’ ಇಲ್ಲವೆಂದು ಇಡೀ ದೇಶಕ್ಕೆ ತಿಳಿದಿದೆ ಎಂದು ಹೇಳಿದ್ದಾರೆ.
ಚಿನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ,; ಶೀಲಾ ಜೀ, ನೀವು ಹೇಳಿರುವಂತೆ ರಾಹುಲ್ ಗಾಂಧಿಗೆ ಪ್ರಬುದ್ಧತೆ ಇಲ್ಲವೆನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಆದರೂ ನೀವ್ಯಾಕೆ ಉತ್ತರ ಪ್ರದೇಶದಿಂದ ಕಣಕ್ಕಿಳಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನು ಪ್ರಶ್ನಿಸಿದ ರಾಹುಲ್ ಗಾಂಧಿಗೆ, ಕಳೆದ 60 ವರ್ಷಗಳಲ್ಲಿ ಯುಪಿಎ ನಡೆಸಿದ ಆಡಳಿತಕ್ಕೆ ನೀವು ಹೊಣೆಗಾರರಾಗುತ್ತೀರಾ ಎಂದು ಕೆಣಕಿದ್ದಾರೆ.
ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ ಎಂಬುದನ್ನು ನೆನಪಿಡಿ. ಅವರ ವಯಸ್ಸು ಅದಕ್ಕೆ ಸ್ಪಂದಿಸುತ್ತಿಲ್ಲ. ವರಿಗಿನ್ನೂ 40 ವರ್ಷ. ಒಂದಿಷ್ಟು ಸಮಯಾವಕಾಶ ಕೊಡಿ ಎಂದು ಅಮಿತ್ ಷಾ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
