ಗುಜರಾತ್‌ನಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಸರ್ಕಾರ ರಚಿಸುತ್ತದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷ ರಾಹುಲ್‌ಗೆ ಪಟ್ಟ ಕಟ್ಟಲು ಯಾಕೆ ಇಷ್ಟೊಂದು ತರಾತುರಿಯಲ್ಲಿದೆ ಎಂಬ ಬಗ್ಗೆ ಬಹಳ ಚರ್ಚೆ ಗಳು ದೆಹಲಿಯಲ್ಲಿ ಕಾಂಗ್ರೆಸ್ ವಲಯದಲ್ಲಿಯೇ ನಡೆಯುತ್ತಿವೆ.

ನವದೆಹಲಿ (ಡಿ.12):ಗುಜರಾತ್‌ನಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಸರ್ಕಾರ ರಚಿಸುತ್ತದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷ ರಾಹುಲ್‌ಗೆ ಪಟ್ಟ ಕಟ್ಟಲು ಯಾಕೆ ಇಷ್ಟೊಂದು ತರಾತುರಿಯಲ್ಲಿದೆ ಎಂಬ ಬಗ್ಗೆ ಬಹಳ ಚರ್ಚೆಗಳು ದೆಹಲಿಯಲ್ಲಿ ಕಾಂಗ್ರೆಸ್ ವಲಯದಲ್ಲಿಯೇ ನಡೆಯುತ್ತಿವೆ.

ಇನ್‌ಸೈಡರ್‌ಗಳು ಹೇಳುವ ಪ್ರಕಾರ ಗುಜರಾತ್‌ನಲ್ಲಿ ಕಾಂಗ್ರೆಸ್ ಒಳ್ಳೆಯ ಪ್ರದರ್ಶನ ತೋರಲಿದೆ ಎಂದು ಹೈಕಮಾಂಡ್‌ಗೆ ಅನ್ನಿಸಿದೆ ಯಾದರೂ ಸರ್ಕಾರ ರಚಿಸುತ್ತದೆ ಎಂಬ ಭರವಸೆಯಿಲ್ಲ. ಹೀಗಾಗಿ ಒಂದು ವೇಳೆ ಗುಜರಾತ್‌ನಲ್ಲಿ ಸೋತರೆ ಆಗ ರಾಹುಲ್ ಗಾಂಧಿ ಅಧ್ಯಕ್ಷರಾಗುವುದು ಚರ್ಚೆಯ ವಿಷಯವಾದೀತು ಎಂದು ಫಲಿ ತಾಂಶ ಬರುವ ೨ ದಿನ ಮೊದಲೇ ರಾಹುಲ್‌ಗಾಂಧಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿ ದ್ದಾರೆ. ಏನಾಗುತ್ತದೋ ಗೊತ್ತಿಲ್ಲ, ಆದರೆ ಮೋದಿ ಗೆದ್ದರೇನು ಸೋತರೇನು, ರಾಹುಲ್ ಗೆದ್ದರೇನು ಸೋತ ರೇನು ಎಂಬುದನ್ನು ಬಿಟ್ಟರೆ ಬೇರೆ ಯಾವ ಚರ್ಚೆಯೂ ದೆಹಲಿಯ ರಾಜಕಾರಣಿಗಳು ಮತ್ತು ಪತ್ರಕರ್ತರಲ್ಲಿ ನಡೆಯುತ್ತಿಲ್ಲ.