ಚಿಕಿತ್ಸೆ ಹಾಗೂ ನಿರ್ವಾಹಣ ವ್ಯಚ್ಚವಾಗಿ ಇನ್ನೂ ಒಂದು ಕೋಟಿ ರೂಪಾಯಿಯನ್ನು ವಸೂಲಿ ಮಾಡಲಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂಬೈ(ಫೆ.12): ವಿಶ್ವದ ಅತಿ ತೂಕದ ಮಹಿಳೆ ಎಮಾನ್ ಅಹಮದ್(500ಕೆಜಿ) ಶನಿವಾರವಷ್ಟೇ ಚಿಕಿತ್ಸೆಗಾಗಿ ಈಜಿಪ್ಟ್'ನಿಂದ ಭಾರತಕ್ಕೆ ಬಂದಿದ್ದಾರೆ. ಈಜಿಪ್ಟಿನ ಕೈರೋದಿಂದ ಮುಂಬೈನ ಸೈಫಿ ಆಸ್ಪತ್ರೆಗೆ ಕಾರ್ಗೋ ವಿಶೇಷ ವಿಮಾನದಿಂದ ಅವರನ್ನು ಕರೆತಂದಿರುವುದು ಭಾರೀ ಸುದ್ದಿಯಾಗಿತ್ತು.

ಆಕೆಯನ್ನು ವಿಮಾನದಿಂದ ಕೆಳಗಿಳಿಸಿದ ತಕ್ಷಣ ಆ್ಯಂಬುಲೆನ್ಸ್'ನಿಂದ ಕರೆದೊಯ್ಯುವ ಬದಲು, ಪ್ರತ್ಯೇಕವಾಗಿ ವಿಶೇಷ ಟ್ರಕ್'ನಲ್ಲಿ ಕರೆದೊಯ್ಯಲಾಗಿತ್ತು. ಈಕೆಗಾಗಿ ಸೈಫಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯನ್ನೇ ಮೀಸಲಿಡಲಾಗಿತ್ತು.

ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ಎಮಾನ್ ಅಹಮದ್ ಅವರನ್ನು ಈಜಿಪ್ಟ್'ನಿಂದ ಸೈಫಿ ಆಸ್ಪತ್ರೆಗೆ ಕರೆ ತರಲು ಬರೋಬ್ಬರಿ 83 ಲಕ್ಷರೂಪಾಯಿ ಖರ್ಚಾಗಿದೆ ಎಂದು ವರದಿಯಾಗಿದೆ.

ಚಿಕಿತ್ಸೆ ಹಾಗೂ ನಿರ್ವಾಹಣ ವ್ಯಚ್ಚವಾಗಿ ಇನ್ನೂ ಒಂದು ಕೋಟಿ ರೂಪಾಯಿಯನ್ನು ವಸೂಲಿ ಮಾಡಲಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.