ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು (ಡಿ.18): ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಜನವರಿಗೆ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಡಿಜಿಪಿ ಯಾರೆಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ.
ಪೊಲೀಸ್ ಉನ್ನತ ಹುದ್ದೆಗೆ 1981ನೇ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ, ಕೇಂದ್ರ ಗೃಹ ಇಲಾಖೆ ವಿಶೇಷ ಕಾರ್ಯದ ರ್ಶಿ ರೂಪ್ ಕುಮಾರ್ ದತ್ತ, 83ನೇ ಬ್ಯಾಚ್‌ನ ರಾಜ್ಯ ಗುಪ್ತಚರ ಇಲಾಖೆ ಮ ಹಾ ನಿರ್ದೇಶಕಿ ನೀಲಮಣಿ ರಾಜು, 84ನೇ ಬ್ಯಾಚ್‌ನ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕ ಎಂ. ಎನ್.ರೆಡ್ಡಿ, 85ನೇ ಬ್ಯಾಚ್‌ನ ರಾಜ್ಯ ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎ.ಎಂ. ಪ್ರಸಾದ್ ಹೆಸರು ಕೇಳಿಬರುತ್ತಿದೆ. ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
