Asianet Suvarna News Asianet Suvarna News

ಯೋಧನಿಗೆ ಥಳಿಸಿದ ಮಹಿಳೆ

ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಮಾರ್ಗದಲ್ಲಿ, ಸೇನಾ ವಾಹನದಲ್ಲಿ ಸಿಂಗ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಅವರ ಮುಂದೆ ಯದ್ವಾತದ್ವಾ ಕಾರು ಚಲಾಯಿಸಿದ್ದಳು.

who slapped army jawan apprehended

ನವದೆಹಲಿ(ಸೆ.16): ಸೇನಾ ಜವಾನರೊಬ್ಬರಿಗೆ ಮಹಿಳೆಯೊಬ್ಬಳು ವಿನಾಕಾರಣ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಶನಿವಾರ ಈ ಘಟನೆ ನಡೆದಿತ್ತು ಎನ್ನಲಾಗಿದ್ದು, ಮಹಿಳೆಯನ್ನು ಇದೀಗ ಬಂಧಿಸಲಾಗಿದೆ. ಥಳಿತಕ್ಕೊಳಗಾಗಿರುವ ಯೋಧ ಜೆಸಿಒ ಮಹಾವೀರ ಸಿಂಗ್ ಎಂದು ಗುರುತಿಸಲಾಗಿದೆ.

ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಮಾರ್ಗದಲ್ಲಿ, ಸೇನಾ ವಾಹನದಲ್ಲಿ ಸಿಂಗ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಅವರ ಮುಂದೆ ಯದ್ವಾತದ್ವಾ ಕಾರು ಚಲಾಯಿಸಿದ್ದಳು. ಬಳಿಕ ಒಮ್ಮೆಗೇ ಕಾರು ನಿಲ್ಲಿಸಿದ ಮಹಿಳೆ ಕಾರಿನಿಂದಿಳಿದು, ಸೇನಾ ವಾಹನದ ಚಾಲಕನಿಗೆ ಮೊದಲು ಥಳಿಸಿದ್ದಳು. ಬಳಿಕ ಸಿಂಗ್ ಬಳಿ ತೆರಳಿ ಏನೊಂದೂ ಮಾತನಾಡುವುದಕ್ಕೆ ಅವಕಾಶ ನೀಡದೆ, ಹೊಡೆದಳು ಎನ್ನಲಾಗಿದೆ. ಆಕೆ ಮಹಿಳೆ ಎಂಬ ಕಾರಣಕ್ಕಾಗಿ ತಾನು ತಿರುಗಿ ಹೊಡೆದಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios