ಬೆಂಗಳೂರು [ಜು.13 :  ರಾಜ್ಯ ರಾಜಕೀಯದ ರಾಜೀನಾಮೆ ಪ್ರಹಸನ ನಡೆಯುತ್ತಿದ್ದು, ಇದೇ ವೇಳೆ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್  ತಮ್ಮ ಜವಾಬ್ದಾರಿ ನಿಬಾಯಿಸುತ್ತಿದ್ದಾರೆ. 

ಒಬ್ಬೊಬ್ಬರೆ ಅತೃಪ್ತರನ್ನು ಮನ ಒಲಿಸಿ ಪಕ್ಷದ ಮುಖಂಡರು ಬಳಿ ಕರೆತಂದು ಒಪ್ಪಿಸುತ್ತಿದ್ದಾರೆ. 

ಮುಂಬೈಗೆ ಅತೃಪ್ತರ ಭೇಟಿಗೆಂದು ತೆರಳಿ ಅವರನ್ನು ಭೇಟಿಯಾಗದೇ ವಾಪಸಾಗಿದ್ದ ಡಿಕೆಶಿ ಇದೀಗ ಬೆಂಗಳೂರಿನಲ್ಲಿರುವ ಅತೃಪ್ತರನ್ನು ಟಾರ್ಗೆಟ್ ಮಾಡಿದ್ದಾರೆ. 

ಕರ್ನಾಟಕ ರಾಜಕೀಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತೃಪ್ತ ನಾಯಕ ಎಂದು ಗುರುತಿಸಿಕೊಂಡ ಎಂಟಿಬಿ ನಾಗರಾಜ್ ಭೇಟಿ ಮಾಡಿ ಚರ್ಚೆ ನಡೆಸಿದ ಡಿ.ಕೆ.ಶಿವಕುಮಾರ್ ಮುಂದಿನ ಟಾರ್ಗೆಟ್ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಎನ್ನಲಾಗಿದೆ. 

ಈಗಾಗಲೇ ಎಂಟಿಬಿ ನಾಗಾರಜ್ ಅವರನ್ನು ಕರೆತಂದು ಸಿದ್ದರಾಮಯ್ಯ ಬಳಿ ಒಪ್ಪಿಸಿ ಚರ್ಚೆ ನಡೆಸುವಲ್ಲಿ ಯಶಸ್ವಿಯಾದ ಅವರು, ಮುಂದೆ ಸುಧಾಕರ್ ಅವರನ್ನು ಭೇಟಿ ಮಾಡಿ ಮನ ಒಲಿಸಲಿದ್ದಾರೆ ಎನ್ನಲಾಗುತ್ತಿದೆ.

"